December 24, 2024

Newsnap Kannada

The World at your finger tips!

ravindra srp

ವೇದಿಕೆಯಲ್ಲೇ ಜಿಲ್ಲಾ ಮಂತ್ರಿ- ಜೆಡಿಎಸ್ ಶಾಸಕ ರವೀಂದ್ರ ನಡುವೆ ಜಟಾಪಟಿ

Spread the love

ಜಿಲ್ಲಾ ಮಂತ್ರಿ ನಾರಾಯಣಗೌಡ ಮತ್ತು ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ನಡುವೆ ಜಟಾಪಟಿ ಭಾರಿ ಸದ್ದು ಮಾಡಿದೆ. ಗಲಾಟೆಯ ವಿಡಿಯೋ ವೈರಲ್ ಆಗಿದೆ.

ಶ್ರೀರಂಗಪಟ್ಟಣ ತಾಲೂಕು ಕಚೇರಿ ಆವರಣದಲ್ಲಿ ನಡೆದ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪರಸ್ಪರ ವಾಕ್ಸಮರ ನಡೆಯಿತು.

ತಹಸೀಲ್ದಾರ್ ರೂಪ ವಿರುದ್ಧ ಆಕ್ರೋಶ ಹೊರಹಾಕಿದ ರವೀಂದ್ರ ನಡೆಗೆ ಸಚಿವರ ಸಿಟ್ಟು. ಆದರೆ ಕಂದಾಯ ಅದಾಲತ್ ಮಾಡುತ್ತಿಲ್ಲ ಎಂದು‌ ರೂಪಾ ವಿರುದ್ಧ ಆರೋಪ ಮಾಡಿದ ರವೀಂದ್ರ ಶ್ರೀಕಂಠಯ್ಯ ಸರ್ಕಾರಿ ಅಧಿಕಾರಿ ವಿರುದ್ದ ಹರಿಹಾಯ್ದರು.

ravindra srp2

ಶಾಸಕರ ಆರೋಪ ತಳ್ಳಿಹಾಕಿದ ತಹಶಿಲ್ದಾರ್ ರೂಪ ತಾವು ಮಾಡಿರುವ ಕೆಲಸಕ್ಕೆ ಸಾಕ್ಷಿ ನೀಡುವುದಾಗಿ ವೇದಿಕೆಯಲ್ಲೇ ಸ್ಪಷ್ಟನೆ ನೀಡಿದ ಕೂಡಲೇ ಜಟಾಪಟಿ ಆರಂಭವಾಯಿತು.

ತಹಸೀಲ್ದಾರ್ ಉತ್ತರಕ್ಕೆ ಸಿಟ್ಟಾಗಿ ಶಾಸಕರು ಏಕವಚನದಲ್ಲೇ ಆವಾಜ್ ಹಾಕಲು ಮುಂದಾದಾಗ ಮಂತ್ರಿ ನಾರಾಯಣ ಗೌಡ ಎಲ್ಲವನ್ನೂ ನೋಡುತ್ತಿದ್ದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಚಿವ ನಾರಾಯಣಗೌಡ, ರವೀಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು.

ಜನ ಪ್ರತಿನಿಧಿಗಳ ವಾಕ್ ಸಮರವು
ಪರಿಸ್ಥಿತಿ ಕೈ ಮೀರುತ್ತಿದೆ ಎಂಬ ಹಂತಕ್ಕೆ ತಲುಪುತ್ತಿದ್ದಾಗ ಸಮಾಧಾನಗೊಂಡ ಉಭಯ ನಾಯಕರು ಸರ್ಕಾರದ ಕಾರ್ಯಕ್ರಮದಲ್ಲಿ ಮುಜುಗರಕ್ಕೆ ಒಳಗಾದ ಇಬ್ಬರು ನಾಯಕರು.

Copyright © All rights reserved Newsnap | Newsever by AF themes.
error: Content is protected !!