ಜನ ಮಾಸ್ಕ್, ಸಾಮಾಜಿಕ ಅಂತರ ಕಾಯದೇ ಹೋದರೆ ಮಾಲೀಕರಿಗೆ ಭಾರಿ ದಂಡದ ಬರೆ – ಬಿಬಿಎಂಪಿ ನಿರ್ಧಾರ

Team Newsnap
1 Min Read
Major Surgery in BBMP: Transfer of 9 Officers: Order of DCM DK ಬಿಬಿಎಂಪಿ ಯಲ್ಲಿ ಮೇಜರ್ ಸರ್ಜರಿ : 9 ಅಧಿಕಾರಿಗಳ ವರ್ಗಾವಣೆ #BBMP #DKShi

ಸಾರ್ವಜನಿಕ ಸ್ಥಳಗಳಾದ ಹೋಟೆಲ್, ಮಾಲ್, ಅಂಗಡಿಗಳು, ದರ್ಶಿನಿಗಳಲ್ಲಿ ಒನರು ಮಾಸ್ಕ್ ಧರಿಸದಿದ್ದರೆ, ಸಾಮಾಜಿಕ ಅಂತರ ಕಾಯದಿದ್ದರೆ ಮಾಲೀಕರಿಗೆ ಬಿಬಿಎಂಪಿ ಬರೆ ಹಾಕಲು ನಿರ್ಧರಿಸಿದೆ.

ಎತ್ತಿಗೆ ಜ್ವರ ಬಂದರೆ ಎನ್ನುವ ಕಥೆ ಆಯ್ತು. ಸಾರ್ವಜನಿಕ ಸ್ಥಳಗಳಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಂಗಡಿ, ಹೋಟೆಲ್, ಮಾಲೀಕರಿಗೆ ಭಾರಿ ದಂಡದ ಬರೆ ಹಾಕಲು ಬಿಬಿಎಂಪಿ ಹೊಸ ರೂಲ್ಸ್ ಜಾರಿ ಮಾಡಿದೆ.

  • ಕೊರೋನಾ ಸೋಂಕು ತಡೆಗಟ್ಟಲು ಬಿಬಿಎಂಪಿ ಕಠಿಣ ರೂಲ್ಸ್ ಜಾರಿಗೆ ತಂದಿದೆ.
  • 5000 ರುಗಳಿಂದ 1 ಲಕ್ಷ ರುಗಳ ವರೆಗೆ ದಂಡ ವಿಧಿಸಲಾಗುವುದು.
  • ತಮ್ಮ ಅಂಗಡಿ, ಹೋಟೆಲ್, ಮಾಲ್, ಸೂಪರ್ ಮಾರುಕಟ್ಟೆ ಹಾಗೂ ಬೀದಿ ಬದಿಯ ವ್ಯಾಪಾರಕ್ಕೆ ಬರುವ ಜನರು ಕಡ್ಡಾಯ ಮಾಸ್ಕ್ ಹಾಕಿರಬೇಕು ಮಾತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳು ವುದನ್ನು ನೋಡದಿದ್ದರೆ ಮಾಲೀಕರಿಗೆ ಸಾವಿರಾರು ರು ದಂಡ ವಿಧಿಸಲಾಗುತ್ತದೆ.
  • ಹೋಟೆಲ್, ಕಲ್ಯಾಣ ಮಂಟಪ, ಚಿತ್ರ ಮಂದಿರಗಳು, ಸೂಪರ್ ಮಾರುಕಟ್ಟೆಯ ಮಾಲೀಕರಿಗೆ 50 ಸಾವಿರ ರು ದಂಡ.
    “ಪಾರ್ಟಿ ಹಾಲ್, ಅಂಗಡಿ ಮಳಿಗೆಗಳು, ಡಿಪಾರ್ಟ್‌ಮೆಂಟಲ್ ಸ್ಟೋರ್ಸ್ ಖಾಸಗಿ ಬಸ್ ನಿಲ್ದಾಣ ಗಳಲ್ಲಿ ಜನರು ನಿಯಮ ಉಲ್ಲಂಘನೆ ಮಾಡಿದರೆ 25 ಸಾವಿರ ರು ದಂಡ ವಿಧಿಸಲಾಗುತ್ತದೆ.
  • ದರ್ಶಿನಿ. ಬೀದಿಬದಿಯ ವ್ಯಾಪಾರ ಸ್ಥಳ ಗಳಲ್ಲಿ ಜನರು ಕೊರೋನಾ ನಿಯಮ ಉಲ್ಲಂಘನೆ ಮಾಡಿದರೆ ಮಾಲೀಕರಿಗೆ 5000 ಸಾವಿರ ರು ದಂಡ ವಿಧಿಸಲಾಗುತ್ತದೆ.
Share This Article
Leave a comment