January 5, 2025

Newsnap Kannada

The World at your finger tips!

kageri

ಜ. 28 ರಿಂದ ಫೆ. 5ರ ತನಕ 7 ದಿನಗಳ ಕಾಲ ವಿಧಾನಸಭೆಯ ಅಧಿವೇಶನ- ಸ್ಪೀಕರ್ ಕಾಗೇರಿ

Spread the love

ರಾಜ್ಯ ವಿಧಾನ ಸಭೆ ಅಧಿವಶನವು ಜನವರಿ 28 ರಿಂದ‌ ಫೆ 5 ರವರೆಗೆ
ನಡೆಯಲಿದೆ.‌

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, 15ನೇ ವಿಧಾನಸಭೆಯ 9ನೇ ಅಧಿವೇಶನದ ಕುರಿತು ಮಾಹಿತಿ ನೀಡಿದರು.

ಕಾಗೇರಿ ಸುದ್ದಿಗೋಷ್ಟಿಯಲ್ಲಿ ಹೇಳಿದಿಷ್ಟು:

1) 15ನೇ ವಿಧಾನಸಭೆಯ 9ನೇ ಅಧಿವೇಶನ ನಾಳೆಯಿಂದ 7ದಿನಗಳ ಕಾಲ ನಡೆಯಲಿದೆ. ಅಧಿವೇಶನಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

2) ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಹ್ವಾನಿಸಿದ್ದೇನೆ. ರಾಜ್ಯಪಾಲರ ಭಾಷಣದ ಬಳಿಕ ಸಂತಾಪ ಸೂಚನೆ ಬಳಿಕ ಕಲಾಪ ಮುಂದೂಡಲಾಗುತ್ತದೆ.

3) ಶುಕ್ರವಾರದಿಂದ ಪ್ರಶ್ನೋತ್ತರ ಕಲಾಪ ಸೇರಿ ಉಳಿದ ಕಲಾಪಗಳು ನಡೆಯು ತ್ತವೆ. ಈ ಬಾರಿ 11 ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುತ್ತವೆ.

4) ಗೋ ಹತ್ಯೆ ನಿಷೇಧ ವಿಧೆಯಕ ಇನ್ನೂ ವಿಧಾನ ಪರಿಷತ್ ನಲ್ಲಿ ಅಂಗೀಕಾರ ವಾಗುವುದು ಬಾಕಿ ಇದೆ. ಮೂರು ವಿಶ್ವವಿದ್ಯಾಲಯಗಳ ವಿಧೇಯಕ ಹಾಗೂ ಮೂರು ಸುಗ್ರೀವಾಜ್ಞೆಗಳ ವಿಧೇಯಕಗಳಿವೆ.

5) ಅನಾರೋಗ್ಯ ಇರುವವರು ಸದನಕ್ಕೆ ಹಾಜರಾಗದೇ ಇರುವುದು ಒಳ್ಳೆಯದು. ಲಕ್ಷಣಗಳು ಇದ್ದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲೂ ವ್ಯವಸ್ಥೆ ಮಾಡ ಲಾಗಿದೆ‌. ಆದರೆ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯವೇನಲ್ಲ.

6) ಈ ಬಾರಿಯೂ ಅಧಿವೇಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಅಧಿವೇಶನದಲ್ಲಿ ಇದ್ದ ನಿರ್ಬಂಧ, ವ್ಯವಸ್ಥೆಗಳು ಮುಂದುವರಿಯುತ್ತದೆ‌.

7) ಅಧಿವೇಶನದ ಸಂದರ್ಭದಲ್ಲೇ ಒಂದು ದಿನ ಒನ್ ನೇಷನ್ ಒನ್ ಎಲೆಕ್ಷನ್ ವಿಷಯವೂ ಚರ್ಚೆಯಾಗ ಲಿದೆ. ಶೀಘ್ರದಲ್ಲೇ ಅದಕ್ಕೆ ದಿನಾಂಕ ನಿಗದಿ ಪಡಿಸಲಾಗುತ್ತದೆ.

8) ಯಾವುದೇ ಮಸೂದೆಗಳಿದ್ದರೂ ಸರ್ಕಾರ ಮುಂಚಿತವಾಗಿಯೇ ಸಚಿವಾಲಯಕ್ಕೆ ಕಳುಹಿಸಿಕೊಡಬೇಕು. ಇದರಿಂದ ಸದಸ್ಯರಿಗೆ ಚರ್ಚೆಗೆ ಸಿದ್ಧವಾಗಿ ಬರಲು ಅವಕಾಶವಾಗುತ್ತದೆ.

Copyright © All rights reserved Newsnap | Newsever by AF themes.
error: Content is protected !!