ರಾಹುಲ್ ಗಾಂಧಿಗೆ ಜೈಲು ಶಿಕ್ಷೆ : ತಡೆಯಲು ಹೈಕೋರ್ಟ್ ನಕಾರ

Team Newsnap
1 Min Read
Madhya Pradesh Congress to power: Rahul Gandhi confident of winning 150 seats ಮಧ್ಯ ಪ್ರದೇಶ ಕಾಂಗ್ರೆಸ್ ಅಧಿಕಾರಕ್ಕೆ : 150 ಸ್ಥಾನಗಳ ಗೆಲುವು ಸಾಧ್ಯತೆ ರಾಹುಲ್ ಗಾಂಧಿ ವಿಶ್ವಾಸ

ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು ಶಿಕ್ಷೆಗೆ ತಡೆಯಾಜ್ಞೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ್ದರಿಂದ ರಾಹುಲ್ ಗಾಂಧಿಗೆ ಭಾರಿ ಹಿನ್ನಡೆಯಾಗಿದೆ.

ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆಗೆ ತಡೆಯಾಜ್ಞೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನ ಗುಜರಾತ್ ಹೈಕೋರ್ಟ್ ಆಲಿಸಿತ್ತು.

ರಾಹುಲ್ ಗಾಂಧಿ ವಿರುದ್ಧ ಕನಿಷ್ಠ 8 ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳು ಬಾಕಿ ಉಳಿದಿವೆ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವು ಯಾವುದೇ ಹಸ್ತಕ್ಷೇಪವನ್ನು ಬಯಸುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ರಾಹುಲ್‌ ಗಾಂಧಿ ಜೊತೆಗೆ ನಾವು ಇದ್ದೀವಿ: DCM ಡಿ.ಕೆ ಶಿವಕುಮಾರ್‌

ಕೋರ್ಟ್‌ ಏನೇ ತೀರ್ಪು ಕೊಡಲಿ ನಾವು ಅವರ ಪರ ಇದ್ದು, ಇಂದು ಮಧ್ಯಾಹ್ನ ಮೂರು ಗಂಟೆಗೆ ಸುಮಾರಿಗೆ ವಿಧಾನಸೌಧದ ಮುಂಭಾಗದಲ್ಲಿ ಗಾಂಧಿಜೀಯವರ ಪ್ರತಿಮೆ ಮುಂದೆ ನಾವೆಲ್ಲ ಪ್ರತಿಭಟನೆ ನಡೆಸುತ್ತೇವೆ ಎಂದು DCM ಡಿ.ಕೆ ಶಿವಕುಮಾರ್ ಅವರು ಹೇಳಿದರು.

ಇದು ಬಿಜೆಪಿಯ ಕುತಂತ್ರವಾಗಿದ್ದು, ಈನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.

Share This Article
Leave a comment