December 23, 2024

Newsnap Kannada

The World at your finger tips!

2f22192e 566b 4bff 9176 5a79a956d954

ಜೈ ಶ್ರೀರಾಮ್ ಎಂದು ಹೇಳುವವರು ರಾಕ್ಷಸರು- ಕಾಂಗ್ರೆಸ್​ ನಾಯಕ ರಶೀದ್ ಅಲ್ವಿ

Spread the love

ರಾಮರಾಜ್ಯ, ಜೈ ಶ್ರೀರಾಮ್ ಎಂದ ಘೋಷಣೆ ಕೂಗುವವರು ಋಷಿಗಳಲ್ಲ, ರಾಕ್ಷಸರು…ಹೀಗೆಂದು ಹೇಳಿದವರು ಕಾಂಗ್ರೆಸ್​ ನಾಯಕ ರಶೀದ್ ಅಲ್ವಿ. ಇವರ ಈ ಹೇಳಿಕೆಗೆ ದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ರಶೀದ್​ ಅಲ್ವಿ.. ಈ ದೇಶದಲ್ಲಿ ರಾಮರಾಜ್ಯ ಆಗಬೇಕು ಅನ್ನೋದು ನಮಗೂ ಇದೆ. ಮೇಕೆಗಳು ಮತ್ತು ಸಿಂಹಗಳು ನೀರು ಕುಡಿಯುವ ರಾಜ್ಯದಲ್ಲಿ ದ್ವೇಷ ಹೇಗೆ ಉಂಟಾಗುತ್ತದೆ? ಎಂದು ಪ್ರಶ್ನೆ ಮಾಡಿದರು

ಈ ದೇಶದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ಜನರನ್ನು ದಾರಿ ತಪ್ಪಿಸುವವರ ಬಗ್ಗೆ ಎಚ್ಚರದಿಂದಿರಬೇಕು ಎಂದಿದ್ದಾರೆ.

ಭಾರತ ದೇಶದಲ್ಲಿ ರಾಮರಾಜ್ಯ ಇದೆ ಅಂತಾ ಹೇಳ್ತೀವಿ. ಆದರೆ ರಾಮರಾಜ್ಯ ಹೇಗೆ ಇರಬೇಕು? ಜೈ ಶ್ರೀರಾಮ್ ಎಂದು ಘೋಷಣೆ ಕೂಗುವವರು ರಾಮಾಯಣದ ಕಾಲನೇಮಿ ರಾಕ್ಷಸರು ಎಂದು ವಿವಾದಾತ್ಮಕ ಹೇಳಿಕೆಯನ್ನು ಹರಿಬಿಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!