ಜ. 31 ರಂದು ಪತ್ರಕರ್ತ ಜಗನ್ನಾಥ್ ಗೆ ರೋಹಿತ್ ಮಾಧ್ಯಮ ಪ್ರಶಸ್ತಿ ಪ್ರದಾನ

Team Newsnap
1 Min Read

ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅಕಾಲ ಮರಣಕ್ಕೆ ತುತ್ತಾದ ಪತ್ರಕರ್ತ ರೋಹಿತ್ ಅವರ ಹೆಸರಿನಲ್ಲಿ ರೋಹಿತ್ ಮಾಧ್ಯಮ ಪ್ರಶಸ್ತಿಯನ್ನು ಬೆಂಗಳೂರಿನ ಐಎಂಎಸ್ಆರ್ ಸಂಸ್ಥೆ ಸ್ಥಾಪಿಸಿದೆ. ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುತ್ತಿದ್ದು 5 ಸಾವಿರ ರು ನಗದು ಮತ್ತು ಫಲಕ ನೀಡಿ ಗೌರವಿಸಲಾಗುವುದು.

ಈ ಬಾರಿ ಪ್ರಶಸ್ತಿಯನ್ನು ತುಮಕೂರು ಜಿಲ್ಲೆಯ ವಿಜಯವಾಣಿ ವರದಿಗಾರ ಜಗನ್ನಾಥ್ ಕಾಳೇನಹಳ್ಳಿ ಅವರಿಗೆ ನೀಡಿ ಗೌರವಿಸಲಾಗುವುದು

ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 31 ರಂದು ಬೆಳಗ್ಗೆ 11.30ಕ್ಕೆ ಬೆಂಗಳೂರಿನಲ್ಲಿರುವ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ನಡೆಯಲಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಫಾದರ್ ಡಾ.ಅಗಸ್ತೀನ್ ಜಾರ್ಜ್, ಮುಖ್ಯ ಅತಿಥಿಯಾಗಿ ಟೈಮ್ಸ್ ಆಫ್ ಇಂಡಿಯಾ ಸ್ಥಾನಿಕ ಸಂಪಾದಕ ಆಶಾ ರೈ ಭಾಗವಹಿಸುವರು.
ರೋಹಿತ್ ಅವರ ತಂದೆ ರಾಜಣ್ಣ ಪ್ರಶಸ್ತಿ ಪ್ರದಾನ ಮಾಡುವರು.

ಟೈಮ್ಸ್ ಆಫ್ ಇಂಡಿಯಾ, ವಿಜಯ ಟೈಮ್ಸ್, ಡಿಎನ್ಎ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದವರು. ಅತಿ ಚಿಕ್ಕವಯಸ್ಸಿನಲ್ಲೇ ಉತ್ತಮ ವರದಿಗಾರ ಎಂಬ ಖ್ಯಾತಿಗಳಿಸಿದವರು. ತಮ್ಮ ತೋಟದ ಬಾವಿಯಲ್ಲಿ ಈಜುವಾಗ ಆಕಸ್ಮಿಕವಾಗಿ ಸಾವನ್ನಪ್ಪಿದರು.

ಎಲ್ಲರೂ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿ ಬೆಂಗಳೂರಿಗೆ ಬರಲು ಬಯಸಿದರೆ, ಇವರು ಬೆಂಗಳೂರಿನಲ್ಲಿ ಕೆಲಸ ಮಾಡಿ ತುಮಕೂರು ಜಿಲ್ಲಾ ವರದಿಗಾರರಾಗಿ ವಿಜಯವಾಣಿ ಪತ್ರಿಕೆಗೆ ಕೆಲಸ ಮಾಡುತ್ತಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದ ಅನುಭವ ಹೊಂದಿರುವ ಇವರು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಎತ್ತಿದ ಕೈ.

b4f2d014 e2ed 426c ac6c 3d6c94e6b05c rotated

ಐಎಂಎಸ್ಆರ್

ಭಾರತೀಯ ಮಾಧ್ಯಮ ರಂಗದಲ್ಲಿ ಹಲವು ಬದಲಾವಣೆಗಳು ಬರುತ್ತಿದ್ದು, ಅದಕ್ಕೆ ಯುವ ಪೀಳಿಗೆ ತೆರೆದುಕೊಳ್ಳಬೇಕಿದೆ. ಅವರಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಪತ್ರಕರ್ತರು ಮತ್ತು ಮಾಧ್ಯಮ ಶಿಕ್ಷಣದಲ್ಲಿ ನಿರತರಾದವರು ಸೇರಿ ಈ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ರೋಹಿತ್ ಹೆಸರಿನಲ್ಲಿ ಮಾಧ್ಯಮ ಪ್ರಶಸ್ತಿ ಸ್ಥಾಪಿಸಲಾಗಿದ್ದು, ಪ್ರತಿ ವರ್ಷ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.

Share This Article
Leave a comment