ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಪ್ಲ್ಯಾಟ್ ನಲ್ಲಿ 42 ಕೋಟಿ ರು ಸೀಜ್ ಮಾಡಿದ ಐಟಿ ಅಧಿಕಾರಿಗಳು

Team Newsnap
1 Min Read

ಬೆಂಗಳೂರು : ಬೆಂಗಳೂರಲ್ಲಿ ಆದಾಯ ಅಧಿಕಾರಿಗಳು ನಿನ್ನೆ ರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿ ಬರೊಬ್ಬರಿ 23 ಬಾಕ್ಸ್​ಗಳಲ್ಲಿ 42 ಕೋಟಿ ರು ಕಂತೆ ಕಂತೆ ಹಣ ನೋಟುಗಳನ್ನು ಪತ್ತೆ ಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ .

ಪ್ಲಾಟ್ ಒಂದರಲ್ಲಿ ಐನೂರು ಮುಖಬೆಲೆಯ 42 ಕೋಟಿ ರು ಹಣವನ್ನು ಕಂಡು ಐಟಿ ಅಧಿಕಾರಿಗಳು ದಂಗಾಗಿದ್ದಾರೆ.

ಬೆಂಗಳೂರಿನ ಆರ್​ಟಿ ನಗರದ ಎರಡು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್​ನಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ.

ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಸಂಬಂಧಿ ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮನ ಗಂಡ ಅಂಬಿಕಾಪತಿಗೆ ಸೇರಿದ ಹಣ ಎಂದು ಹೇಳಲಾಗಿದೆ.

ಈ ಪ್ರಮಾಣದ ಹಣವನ್ನು ಕಾರಿನಲ್ಲಿ ಸಾಗಾಟ ಮಾಡಲು ತಯಾರಿ ನಡೆದಿತ್ತು. ಪ್ಲಾಟ್​ನಲ್ಲಿ ಕೋಟಿ ಕೋಟಿ ಹಣದ ಬಾಕ್ಸ್​ಗಳು ಪತ್ತೆಯಾದ ಬೆನ್ನಲ್ಲೇ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇಷ್ಟೊಂದು ಹಣ ಯಾರಿಗೆ ಸೇರಿದ್ದು? ಆಫ್ಲಾಟ್ ಯಾರದ್ದು ಎಂಬ ಬಗ್ಗೆ ಐಟಿ ಅಧಿಕಾರಿಗಳು ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒಂದು ವರದಿಗಳ ಪ್ರಕಾರ, ಅಷ್ಟೊಂದು ಹಣವನ್ನು ಕಾರಿನ ಮೂಲಕ ತಮಿಳುನಾಡು ಕಡೆಗೆ ಸಾಗಿಸಲು ಪ್ಲಾನ್ ಮಾಡಿದ್ದರು ಎನ್ನಲಾಗುತ್ತಿದೆ.ಕೃಷಿ ಇಲಾಖೆಯ ಎರಡು ಸಾವಿರ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ – ಸಚಿವ ಚಲುವರಾಯಸ್ವಾಮಿ

ಪಂಚರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Share This Article
Leave a comment