February 23, 2026

Newsnap Kannada

The World at your finger tips!

BASAVARAJ BOMM

ಯಾರು ಉಪವಾಸ ಕೂರುತ್ತಾರೆ, ಊಟ ಮಾಡುತ್ತಾರೆನ್ನುವುದು ಮುಖ್ಯ ಅಲ್ಲ ; ಅಣ್ಣಾಮಲೈ ಗೆ ಸಿ ಎಂ ಟಾಂಗ್

Spread the love

ಯಾರು ಬೇಕಾದ್ರೂ ಉಪವಾಸ ಮಾಡಲಿ, ಅಥವಾ ಯಾರು ಬೇಕಾದರೂ ಊಟ ಮಾಡಲಿ ಮೇಕೆದಾಟು ಅಣೆಕಟ್ಟು ಯೋಜನೆ ಮಾಡುವುದು ನಮ್ಮ ಹಕ್ಕು. ಆ ನೀರಿನಲ್ಲಿ ನಮ್ಮ ಪಾಲಿದೆ. ಯೋಜನೆ ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್​ ತಯಾರು ಮಾಡಲಾಗುತ್ತಿದೆ. ಅದು ತಯಾರಾಗ್ತಿದ್ದಂತೆ ಯೋಜನೆಯನ್ನು ಅನುಷ್ಠಾನಕ್ಕೆ ತರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ನವದೆಹಲಿಯಿಂದ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ ಮೇಕೆದಾಟು ಅಣೆಕಟ್ಟು ಯೋಜನೆ ವಿಚಾರವಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಉಪವಾಸ ಕೂರುವುದಾಗಿ ನೀಡಿರುವ ಹೇಳಿಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ ರಾಜ್ಯದ ಹಕ್ಕನ್ನು ಪ್ರತಿಪಾದಿಸಿದರು.

ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಬರಬೇಕಾದ ಜಿಎಸ್​ಟಿ ಪಾಲಿನ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದರು.

ಕೇಂದ್ರ ವಿತ್ತ ಸಚಿವರು ರಾಜ್ಯದ ಪಾಲಿನ‌ ಹಣ ಕೊಡಲು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆಂದರು.‌

error: Content is protected !!