ವಿದ್ಯುತ್ ದರ ತಗ್ಗಿಸುವುದು ಕಷ್ಟ : ಸಿಎಂ ಸಿದ್ದರಾಮಯ್ಯ

Team Newsnap
1 Min Read

ಬೆಂಗಳೂರು: ವಿದ್ಯುತ್ ದರ ತಗ್ಗಿಸುವುದು ಕಷ್ಟ. ಆದರೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಎನ್.ನರಸಿಂಹ ಮೂರ್ತಿ ನೇತೃತ್ವದ ನಿಯೋಗದೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯದ ಎಂಎಸ್‌ಎಂಇಗಳ ಸಮಸ್ಯೆಗಳನ್ನು ಪರಿಹರಿಸಲು ಇಂಧನ, ಕೈಗಾರಿಕೆ ಮತ್ತು ಕಾಸಿಯಾ ಇಲಾಖೆಗಳೊಂದಿಗೆ ಸಭೆ ನಡಸಲಾಗುವುದು ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್ ಸಿ) ವಿದ್ಯುತ್ ಶುಲ್ಕವನ್ನು ಹೆಚ್ಚಿಸಿತ್ತು. ಬಿಜೆಪಿ ತನ್ನ ತಪ್ಪನ್ನು ಕಾಂಗ್ರೆಸ್ ಸರ್ಕಾರದ ಮೇಲೆ ಹೇರುತ್ತಿದೆ ಎಂದರು.ಎಸ್ ಎಸ್ ಎಲ್ ಸಿ ಪಾಸಾದವರಿಗೆ ರೈಲ್ವೆಯಲ್ಲಿ 3624 ಖಾಲಿ ಹುದ್ದೆಗಳ ನೇಮಕಾತಿ

ಹಿಂದಿನ ಸರ್ಕಾರವು ಎಸ್ಕಾಂಗಳಿಗೆ 11,000 ಕೋಟಿ ರು ಆ ಬಾಕಿಗಳನ್ನು ನಾವು ಪಾವತಿಸಬೇಕಾಗುತ್ತದೆ. ಹಿಂದಿನ ಬಿಜೆಪಿ ಸರ್ಕಾರದ ಆರ್ಥಿಕ ಅಶಿಸ್ತಿನಿಂದ ಉಂಟಾದ ಹಾನಿಯನ್ನು ಪರಿಹರಿಸಬೇಕಾಗಿದೆ ಎಂದರು

Share This Article
Leave a comment