February 23, 2026

Newsnap Kannada

The World at your finger tips!

umesh yadi

ಐಟಿ ದಾಳಿ – ಸಿಎಂ ಕಚೇರಿಯಿಂದ ಉಮೇಶ್‍ ಗೆಟ್ ಔಟ್

Spread the love

ಆದಾಯ ತೆರಿಗೆ ಇಲಾಖೆ ದಾಳಿ ಬೆನ್ನಲ್ಲೇ ಬಿಎಂಟಿಸಿ ಉಮೇಶ್ ಗೆ ಸಿಎಂ ಕಚೇರಿಯಿಂದ ಗೇಟ್‍ ಔಟ್ ಮಾಡಿದೆ.

ಓಓಡಿ ಮೇಲೆ ಸಿಎಂ ಕಚೇರಿಯಲ್ಲಿ ಉಮೇಶ್ ಕೆಲಸ ಮಾಡುತ್ತಿದ್ದ. ಇದೀಗ ಉಮೇಶ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಸಿಎಂ ಸೂಚನೆ ಮೇರೆಗೆ ಓಓಡಿ ಆದೇಶವನ್ನು ಬಿಎಂಟಿಸಿ ಹಿಂದಕ್ಕೆ ಪಡೆದಿದೆ.

ಉಮೇಶ್ ಡಿಪೋ 11ರಲ್ಲಿ ಕಂಡಕ್ಟರ್ ಕಂ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಉಮೇಶ್ ಬಿಎಂಟಿಸಿಯಿಂದ ಪಡೆಯುತ್ತಿದ್ದ ತಿಂಗಳ ಸಂಬಳ 32 ಸಾವಿರ ರೂಪಾಯಿ. ಕೈಗೆ ಸಿಗುತ್ತಿದ್ದಿದ್ದು 28 ಸಾವಿರ ಮಾತ್ರ.

ಈಗ ಉಮೇಶ್ ವೇತನ ತಿಂಗಳಿಗೆ 30ರಿಂದ 32 ಸಾವಿರ ರೂ. ಇದೆ. ಎರವಲು ಸೇವೆಗೆ ನಿಯೋಜನೆಯಾದರೆ ಎರಡು ವರ್ಷದ ಬಳಿಕ ಮಾತೃ ಇಲಾಖೆಯಲ್ಲಿ ಕೆಲಸ ಮಾಡಿ, ನಿಯೋಜನೆ ಕೆಲಸ ಪಡೆಯಬಹುದು. ಆದರೆ ಉಮೇಶ್ ಮಾತ್ರ 2008ರಿಂದ ಎರವಲು ಸೇವೆಯಲ್ಲಿಯೇ ಮುಂದುವರಿಯುತ್ತಿರುವುದು ವಿಶೇಷ.

ಸದ್ಯ ಎರಡನೇ ದಿನವೂ ಐಟಿ ಅಧಿಕಾರಿಗಳು ಪರಿಶೀಲನೆ ಮುಂದುವರಿಸಿದ್ದಾರೆ.

error: Content is protected !!