ಇಸ್ರೋ ಖ್ಯಾತ ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ಗೆ ಹೃದಯಾಘಾತ : ನಾರಾಯಣ ಹೃದಯಾಲಯಕ್ಕೆ ಏರ್ ಲಿಫ್ಟ್

Team Newsnap
1 Min Read

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಒಂದು ದಶಕಗಳಷ್ಟು ಹೆಚ್ಚು ಸಮಯ ಅಧ್ಯಕ್ಷರಾಗಿದ್ದ ವಿಜ್ಞಾನಿ ಡಾ. ಕೆ .ಕಸ್ತೂರಿ ರಂಗನ್‌ ಅವರಿಗೆ ಲಘು ಹೃದಯಾಘಾತವಾಗಿದೆ.

ಶ್ರೀಲಂಕಾದಲ್ಲಿ ಹೃದಯಾಘಾತ ಸಂಭವಿಸಿದ್ದು, ಬೆಂಗಳೂರಿಗೆ ಏರ್‌ಲಿಫ್ಟ್‌ ಮಾಡಲಾಗುತ್ತಿದೆ. ಖ್ಯಾತ ಹೃದ್ರೋಗ ತಜ್ಞ ಡಾ ದೇವಿ ಶೆಟ್ಟಿ ಅವರು ಕಸ್ತೂರಿ ರಂಗನ್‌ ಅವರಿಗೆ ಚಿಕಿತ್ಸೆ ನೀಡಲಿದ್ದಾರೆ. 

ಸುಮಾರು ಒಂದು ದಶಕದ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.

ಸದ್ಯ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಏರ್ ಲಿಫ್ಟ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಸ್ತೂರಿರಂಗನ್ ಅವರ ಆರೋಗ್ಯ ಮತ್ತು ಚಿಕಿತ್ಸೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಡಾ.ಕಸ್ತೂರಿರಂಗನ್ ಅವರು ರಾಜಸ್ಥಾನದ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಎನ್‌ಐಐಟಿ ವಿಶ್ವವಿದ್ಯಾಲಯಗಳೆರಡರಲ್ಲೂ ಮಾಜಿ ಕುಲಪತಿಯಾಗಿದ್ದಾರೆ.

ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಕುಲಪತಿಯೂ ಆಗಿದ್ದರು. ಹಾಗೆಯೇ ಕರ್ನಾಟಕ ಜ್ಞಾನ ಆಯೋಗದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Share This Article
Leave a comment