February 12, 2025

Newsnap Kannada

The World at your finger tips!

israel

ಗಾಜಾದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್‌ ಅಸ್ತು: ಭಾನುವಾರದಿಂದ ಜಾರಿಗೆ

Spread the love

ಇಸ್ರೇಲ್ ಸಚಿವ ಸಂಪುಟ ಶನಿವಾರ ಗಾಜಾದಲ್ಲಿ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಅನುಮೋದಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ. ಈ ಒಪ್ಪಂದದೊಂದಿಗೆ ಗಾಜಾದ ಅತ್ಯಂತ ಮಾರಕ ಯುದ್ಧ ಮತ್ತು ಬಾಂಬ್ ದಾಳಿ ನಿಲ್ಲಲಿದೆ. ಭಾನುವಾರದಿಂದ ಕದನ ವಿರಾಮ ಜಾರಿಗೆ ಬರುತ್ತದೆ ಎಂಬುದಕ್ಕೆ ಸ್ಪಷ್ಟತೆ ಬಂದಿದೆ.

ಈ ಒಪ್ಪಂದದ ಪ್ರಕಾರ, ಇಸ್ರೇಲ್ ಜೈಲುಗಳಲ್ಲಿ ಇರುವ ನೂರಾರು ಪ್ಯಾಲೆಸ್ಟೀನಿಯನ್ ಕೈದಿಗಳು ಬಿಡುಗಡೆಗೊಳ್ಳಲಿದ್ದಾರೆ. 2023ರ ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರ ಗುಂಪು ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವು ಜನರನ್ನು ಬಂಧಿಸಿದ್ದ ಹಿನ್ನಲೆಯಲ್ಲಿ ಈ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

ಸರ್ಕಾರದ ಅನುಮೋದನೆಯೊಂದಿಗೆ, ಭಾನುವಾರದಿಂದ 95 ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದೆ. ಈ ಪಟ್ಟಿ ನ್ಯಾಯ ಸಚಿವಾಲಯದ ಮೂಲಕ ಪ್ರಕಟವಾಗಿದ್ದು, ಆ ಪಟಿಯಲ್ಲಿ 69 ಮಹಿಳೆಯರು, 16 ಪುರುಷರು ಮತ್ತು 10 ಅಪ್ರಾಪ್ತರು ಸೇರಿದ್ದಾರೆ.ಇದನ್ನು ಓದಿ –” ನಿಮ್ಮನ್ನು ನೀವು ಪ್ರೀತಿಸುವಿರಾ…….?

ಇದು ಗಾಜಾ ಪ್ರಾಂತ್ಯದಲ್ಲಿ ಶಾಂತಿ ಸ್ಥಾಪನೆಗೆ ಸಹಾಯ ಮಾಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Copyright © All rights reserved Newsnap | Newsever by AF themes.
error: Content is protected !!