ರಾಜೀನಾಮೆ ನೀಡಲ್ಲ ಎಂದು ಹಠಕ್ಕೆ ಬಿದ್ದಿದ್ದ ನಂತರ ಈಶ್ವರಪ್ಪ ದಿಢೀರ್ ರಾಜೀನಾಮೆ ನೀಡಲು ಕಾರಣ ಯಾರು ಗೊತ್ತಾ? ಪ್ರಧಾನಿ ನರೇಂದ್ರ ಮೋದಿಯವರು ಗರಂ ಆಗಿದ್ದೇ ಈಶ್ವರಪ್ಪ ರಾಜೀನಾಮೆಗೆ ಕಾರಣ ಎಂದು ಮೂಲಗಳಿಂದ ತಿಳಿದು ಗೊತ್ತಾಗಿದೆ.
ಸರ್ಕಾರಕ್ಕೆ ಮುಜುಗರ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಹೈಕಮಾಂಡ್ ಈಶ್ವರಪ್ಪಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಆದರೆ ಹೈಕಮಾಂಡ್ ನಾಯಕರೊಬ್ಬರು ಈಶ್ವರಪ್ಪ ರಾಜೀನಾಮೆಯನ್ನು ತಡೆದಿದ್ದರು.
ಹೈಕಮಾಂಡ್ ಸೂಚಿಸಿದ್ದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಿಟ್ಟಾಗಿದ್ದರು. ನಿಯಮ ಎಲ್ಲರಿಗೂ ಒಂದೇ ಎಂದು ಹೇಳಿ ಪ್ರಧಾನಿ ಗರಂ ಆಗಿದ್ದರು.
ನಿನ್ನೆ ಈಶ್ವರಪ್ಪ ರಾಜೀನಾಮೆ ತಡೆದಿದ್ದ ಆ ಹೈಕಮಾಂಡ್ ನಾಯಕನಿಗೂ ಮೋದಿ ಕ್ಲಾಸ್ ಮಾಡಿದ್ದರು.
ಹೈಕಮಾಂಡ್ ನಾಯಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸಿಎಂ ಸೂಚನೆ ಮೇರೆಗೆ ಈಶ್ವರಪ್ಪ ತನ್ನ ನಿರ್ಧಾರ ಬದಲಾಯಿಸಿ ಇಂದು ಸಂಜೆ ಶಿವಮೊಗ್ಗದ್ದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ನಾನು ತಪ್ಪು ಮಾಡಿಲ್ಲ. ಯಾವುದೇ ಅಕ್ರಮ ಎಸಗಿಲ್ಲ. ಇದು ನಮ್ಮ ಕುಲದೇವರು ಚೌಡೇಶ್ವರಿ ಮೇಲೆ ಆಣೆ. ನಾಳೆ ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ ಸಚಿವ ಈಶ್ವರಪ್ಪ.
- ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು