May 21, 2022

Newsnap Kannada

The World at your finger tips!

ramesh kumar 1

ಈಶ್ವರಪ್ಪ ರಾಜೀನಾಮೆ ಬೇಡ : ವಜಾ ಮಾಡಬೇಕು – ರಮೇಶ್ ಕುಮಾರ್

Spread the love

ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವುದು ಬೇಡ. ಅವರನ್ನು ಕೂಡಲೇ ವಜಾಗೊಳಿಸಬೇಕು,

ಇದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಗ್ರಹ . ಕೋಲಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರಮೇಶ್ ಕುಮಾರ್ ರಾಜೀನಾಮೆ ಎನ್ನುವ ಪದ ಗೌರವಯುತವಾದ ಪದ. ಲಾಲ್ ಬಹದ್ದೂರ್ ಶಾಸ್ತ್ರಿ ಕೂಡ ಈ ದೇಶದಲ್ಲಿ ರಾಜೀನಾಮೆ ಕೊಟ್ಟಿದ್ದಾರೆ. ರೈಲ್ವೇ ಅಪಘಾತವಾಗಿ ಅಷ್ಟೂ ಜನ ಸತ್ತಾಗ ರಾಜೀನಾಮೆ ಕೊಟ್ಟರು. ಯಶೋದಮ್ಮ ದಾಸಪ್ಪನವರು ಕೂಡ ರಾಜೀನಾಮೆ ಕೊಡ್ತಾರೆ. ಅಷ್ಟು ಗೌರವಯುತವಾದ ಪದವನ್ನು ಇವರಿಗೆ ಬಳಸುವುದು ಬೇಡ. ಇವರು ರಾಜೀನಾಮೆ ಕೊಡುವುದು ಬೇಡ ಎಂದು ಇವರನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೆ ಈಶ್ವರಪ್ಪ ರಾಜೀನಾಮೆ ಕುರಿತು ರಾಜ್ಯಪಾಲರನ್ನು ಭೇಟಿ ಮಾಡಲಾಗಿದೆ. ಅದನ್ನು ಬಿಡಿ ಬಿಡಿಯಾಗಿ ಹೇಳುವ ಅವಶ್ಯಕತೆ ಇಲ್ಲ. ದೇಶದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಜೀವಂತ ಇರುವವರೆಗೂ ಅವಕಾಶ ನೀಡಲ್ಲ. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ನಾವು ಬಿಡುವುದಿಲ್ಲ. ನಾವು ಕಳೆದು ಹೋದ ಮೇಲೆ ಏನಾಗುತ್ತದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.

error: Content is protected !!