ನೀರಾವರಿ ಇಲಾಖೆ ಚೀಫ್ ಇಂಜಿನಿಯರ್‌ಗೆ ಚಪ್ಪಲಿಯಲ್ಲಿ ಹೊಡೀತೀನಿ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ನಿಂದಿಸಿದ್ದಾರೆ ಎನ್ನಲಾದ 7 ತಿಂಗಳ ಹಿಂದಿನ ಆಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನು ಓದಿ – 2024ರ ಲೋಕಸಭಾ ಚುನಾವಣೆಗೆ 8 ಮಂದಿ ಹಾಲಿ MPಗಳಿಗೆ ಬಿಜೆಪಿ ಟಿಕೆಟ್ ಇಲ್ಲ ? ಯುವಕರಿಗೆ ಆದ್ಯತೆ
ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಬಿಲ್ ಬಿಡುಗಡೆಗೆ ಸಂಬಂಧಿಸಿ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್‌ಗೆ ಶಾಸಕ ಶಿವನಗೌಡರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.

‘ಪೂಜೆ ಮಾಡದೆ ಕ್ಷೇತ್ರದಲ್ಲಿ ಕಾಮಗಾರಿಯ ಬಿಲ್ ಹೇಗೆ ಪಾವತಿಸಿದ್ದೀಯಾ? ಈ ಸಂಬಂಧ ಚರ್ಚಿಸಲು ಆರು ಬಾರಿ ಸಭೆ ಕರೆದರೂ ಬಂದಿಲ್ಲ’ ಎಂದು ಮುಖ್ಯ ಇಂಜಿನಿಯರ್ ಆಗಿದ್ದ ಶಿವಕುಮಾರಗೆ ಅವಾಚ್ಯ ಶಬ್ದಗಳಿಂದ ಕೆ.ಶಿವನಗೌಡ ನಾಯಕ ನಿಂದಿಸಿದ್ದಾರೆ.
ಸಚಿವ ಸಂಪುಟ ಸಭೆ ವಿಸ್ತರಣೆ ಈ ಸಂದರ್ಭದಲ್ಲಿ 7 ತಿಂಗಳ ಹಿಂದೆ ನಡೆದಿದ್ದ ಸಂಭಾಷಣೆಯನ್ನು ಈಗ ವೈರಲ್ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎನ್ನುತ್ತಿದ್ದಾರೆ ಶಾಸಕ ಬೆಂಬಲಿಗರು.
ಈ ಹಿಂದೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಗೆ ಇದೇ ಶಿವನಗೌಡ ನಾಯಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗುತ್ತಿದೆ.
ಅಧಿಕಾರಿ 6 ಬಾರಿ ಸಭೆಗೆ ಗೈರು :
ಕಾಮಗಾರಿಗೆ ಸಂಬಂಧಿಸಿ 7 ತಿಂಗಳ ಹಿಂದೆಯೇ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅಧಿಕಾರಿಯೂ ಆರು ಬಾರಿ ಸಭೆಗೆ ಗೈರು ಹಾಜರಾಗಿದ್ದರಿಂದ ಆಕ್ರೋಶಗೊಂಡು ಮಾತನಾಡಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಿದ್ದೇನೆ ಹೊರತು ಯಾವುದೇ ಬೇರೆ ಉದ್ದೇಶವಿಲ್ಲ. 7 ತಿಂಗಳ ಹಿಂದಿನ ಆಡಿಯೋ ಹೀಗೇಕೆ ವೈರಲ್ ಮಾಡಲಾಗುತ್ತಿದೆ ಎನ್ನುವುದು ಗೊತ್ತಿಲ್ಲ.
- ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ
- ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
- ಡಾ. ವೀರೇಂದ್ರ ಹೆಗ್ಗಡೆ, ಇಳಯರಾಜ ಸೇರಿ ನಾಲ್ವರು ರಾಜ್ಯಸಭೆಗೆ ನಾಮ ನಿರ್ದೇಶನ
- KRSಗೆ 30 ಸಾವಿರ ಕ್ಯೂಸೆಕ್ ಒಳಹರಿವು – ಪ್ರವಾಹದ ಮುನ್ನೆಚ್ಚರಿಕೆ : ಆಣೆಕಟ್ಟೆ ಭರ್ತಿಗೆ 9 ಅಡಿ ಬಾಕಿ
- 18 ದಿನಗಳಲ್ಲಿ 8 ಬಾರಿ ತಾಂತ್ರಿಕ ದೋಷ: ಸ್ಪೈಸ್ ಜೆಟ್ ಗೆ ಡಿಜಿಸಿಎ ನೊಟೀಸ್
ನೀರಾವರಿ ಇಲಾಖೆ
More Stories
ಬಾದಾಮಿಯ ಕೇರೂರಿನಲ್ಲಿ ನೂಪುರ್ ಶರ್ಮ ವಿವಾದ : ಮೂವರ ಯುವಕರ ಮೇಲೆ ಚಾಕೂವಿನಿಂದ ಇರಿದು ಹಲ್ಲೆ
ಶಾಸಕ ಜಮೀರ್ ಅಹಮದ್ ಅಕ್ರಮ ಆಸ್ತಿ 87.44 ಕೋಟಿ: ಇಡಿಗೆ ಎಸಿಬಿ ವರದಿ
ವೆಸ್ಟ್ ಇಂಡೀಸ್ ತಂಡಕ್ಕೆ ಟೀಂ ಇಂಡಿಯಾ ಪ್ರಕಟ : ಶಿಖರ್ ಧವನ್ ನಾಯಕ – ಕೊಹ್ಲಿ, ರೋಹಿತ್ ಗೆ ವಿಶ್ರಾಂತಿ