ಇದನ್ನು ಓದಿ – 2024ರ ಲೋಕಸಭಾ ಚುನಾವಣೆಗೆ 8 ಮಂದಿ ಹಾಲಿ MPಗಳಿಗೆ ಬಿಜೆಪಿ ಟಿಕೆಟ್ ಇಲ್ಲ ? ಯುವಕರಿಗೆ ಆದ್ಯತೆ
ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ಬಿಲ್ ಬಿಡುಗಡೆಗೆ ಸಂಬಂಧಿಸಿ ಕೆಬಿಜೆಎನ್ಎಲ್ ಮುಖ್ಯ ಇಂಜಿನಿಯರ್‌ಗೆ ಶಾಸಕ ಶಿವನಗೌಡರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
‘ಪೂಜೆ ಮಾಡದೆ ಕ್ಷೇತ್ರದಲ್ಲಿ ಕಾಮಗಾರಿಯ ಬಿಲ್ ಹೇಗೆ ಪಾವತಿಸಿದ್ದೀಯಾ? ಈ ಸಂಬಂಧ ಚರ್ಚಿಸಲು ಆರು ಬಾರಿ ಸಭೆ ಕರೆದರೂ ಬಂದಿಲ್ಲ’ ಎಂದು ಮುಖ್ಯ ಇಂಜಿನಿಯರ್ ಆಗಿದ್ದ ಶಿವಕುಮಾರಗೆ ಅವಾಚ್ಯ ಶಬ್ದಗಳಿಂದ ಕೆ.ಶಿವನಗೌಡ ನಾಯಕ ನಿಂದಿಸಿದ್ದಾರೆ.
ಸಚಿವ ಸಂಪುಟ ಸಭೆ ವಿಸ್ತರಣೆ ಈ ಸಂದರ್ಭದಲ್ಲಿ 7 ತಿಂಗಳ ಹಿಂದೆ ನಡೆದಿದ್ದ ಸಂಭಾಷಣೆಯನ್ನು ಈಗ ವೈರಲ್ ಮಾಡುತ್ತಿರುವುದರ ಹಿಂದೆ ಷಡ್ಯಂತ್ರ ಅಡಗಿದೆ ಎನ್ನುತ್ತಿದ್ದಾರೆ ಶಾಸಕ ಬೆಂಬಲಿಗರು.
ಈ ಹಿಂದೆ ಮಹಿಳಾ-ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಗೆ ಇದೇ ಶಿವನಗೌಡ ನಾಯಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗುತ್ತಿದೆ.
ಕಾಮಗಾರಿಗೆ ಸಂಬಂಧಿಸಿ 7 ತಿಂಗಳ ಹಿಂದೆಯೇ ಶಾಸಕಾಂಗ ಸಭೆಯಲ್ಲಿ ಪ್ರಸ್ತಾಪ ಮಾಡಿದ್ದೆ. ಅಧಿಕಾರಿಯೂ ಆರು ಬಾರಿ ಸಭೆಗೆ ಗೈರು ಹಾಜರಾಗಿದ್ದರಿಂದ ಆಕ್ರೋಶಗೊಂಡು ಮಾತನಾಡಿದ್ದೇನೆ. ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಿದ್ದೇನೆ ಹೊರತು ಯಾವುದೇ ಬೇರೆ ಉದ್ದೇಶವಿಲ್ಲ. 7 ತಿಂಗಳ ಹಿಂದಿನ ಆಡಿಯೋ ಹೀಗೇಕೆ ವೈರಲ್ ಮಾಡಲಾಗುತ್ತಿದೆ ಎನ್ನುವುದು ಗೊತ್ತಿಲ್ಲ.
ನೀರಾವರಿ ಇಲಾಖೆ
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು