ರಾಜಸ್ಥಾನ್ ರಾಯಲ್ಸ್‌ಗಳನ್ನು 57 ರನ್‌ಗಳಿಂದ ಪರಾಭವಗೊಳಿಸಿದ ಮುಂಬೈ

Team Newsnap
1 Min Read

ಐಪಿಎಲ್ 20-20ಯ 20 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 57 ರನ್‌ಗಳ ಅದ್ಭುತ ಜಯ ಸಾಧಿಸಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮಣಿಸಿತು.

ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಟಾಸ್ ಗೆದ್ದು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮುಂಬೈ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ರೋಹಿತ್ ಶರ್ಮಾ ಮತ್ತು ಡಿ. ಕಾಕ್ ಸಾಧಾರಣ ಆರಂಭವನ್ನು ನೀಡಿದರು. ರೋಹಿತ್ ಶರ್ಮಾ 35 (23) ಮತ್ತು ಕಾಶ್ 15 (23) ರನ್ ಗಳಿಸಿ ಪೆವಿಲಿಯನ್ ಸೇರಿದರು. ಅವರ ನಂತರ ಬಂದ ಸೂರ್ಯಕುಮಾರ್ ಯಾದವ್ ಅವರು ರಾಯಾಲ್ ಬೌಲರ್ಸ್‌ಗಳನ್ನು ಬಸವಳಿಸಿದರು. 47 ಎಸೆತಗಳಲ್ಲಿ 79 ರನ್ ಗಳಿಕೆ ಮಾಡಿ ತಂಡದ ಗೆಲುವಿನ ಟ್ರ್ಯಾಕ್‌ಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದರು. ಮುಂಬೈ ತಂಡವು 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.

rrmi

193 ರನ್‌ಗಳ ಗುರಿಯನ್ನು ಬೆನ್ನು ಹತ್ತಿ ಹೊರಟ ರಾಜಸ್ಥಾನ್ ರಾಯಲ್ಸ್ ಪ್ರತೀ ಹಂತದಲ್ಲೂ ಎಡವಿತು. ಹಿಂದಿನ ಪಂದ್ಯಗಳಲ್ಲಿದ್ದ ತಂತ್ರಗಾರಿಕೆ,
ಲೆಕ್ಕಚಾರ ಇಂದು ಇರಲಿಲ್ಲ. ರಾಯಲ್ಸ್ ತಂಡದ ಆಟವನ್ನು ಪ್ರಾರಂಭಿಸಿದ ವೈ. ಜೈಸ್ವಾಲ್ ಒಂದೇ ಒಂದು ರನ್ ಗಳಿಸಿದೇ ಬಂದ ಹಾಗೇ ಸೀದಾ ಪೆವಿಲಿಯನ್‌ಗೆ ಹೋದರು. ಜೆ. ಬಟ್ಲರ್ 44 ಎಸೆತಗಳಿಗೆ 70 ರನ್ ಗಳಿಸಿದರಾದರೂ ಇತರೆ ಆಟಗಾರರು ಅವರಿಗೆ ಸಾಥ್ ನೀಡದೇ ಹೋದರು. ಮುಂಬೈ ತಂಡದ ಬೌಲರ್‌ಗಳಾದ ಜೆ. ಬುಮ್ರಾ, ಟಿ. ಚೌಲ್ಟ್, ಜೆ. ಪ್ಯಾಟಿನ್ಸನ್ ಅವರು ಕ್ರಮವಾಗಿ 4,2,2, ವಿಕೆಟ್ ಪಡೆದು ರಾಯಲ್ಸ್ ತಂಡವನ್ನು ದುರ್ಬಲಗೊಳಿಸಿದರು. ರಾಜಸ್ಥಾನ್ ತಂಡ 18.1 ಓವರ್ ಗಳಲ್ಲಿ ತಂಡ 10 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಿತು.

Share This Article
Leave a comment