IPL 20-20-ವಿಜಯ ಸಾಧಿಸಿದ ಡೆಲ್ಲಿ‌ ಕ್ಯಾಪಿಟಲ್ಸ್

Team Newsnap
2 Min Read

ಅರಬ್ ದೇಶದಲ್ಲಿ‌ ನಡೆಯುತ್ತಿರುವ IPL 13ನೇ ಸರಣಿಯಲ್ಲಿ ಡೆಲ್ಲಿ‌ ಕ್ಯಾಪಿಟಲ್ಸ್ ತಂಡ ಗೆದ್ದಿದೆ. ಈ ಮೂಲಕ ಡೆಲ್ಲಿ ಗೆಲುವಿನ ಗರಿಯನ್ನು ತನ್ನ ಮುಡಿಯನ್ನೇರಿಸಿಕೊಂಡಿದೆ.

ಅಲ್ ಶೇಕ್ ಝಹೇದ್ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಿತು. ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಗೆಲುವಿನ ನಗೆ ಬೀರಿದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸೋಲನ್ನನುಭವಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್, ಫೀಲ್ಡಿಂಗ್ ನಲ್ಲಿ ತನ್ನ ಛಾಪನ್ನು ತೋರಿಸಿತು. ಬಿಗಿಯಾದ ಫೀಲ್ಡಿಂಗ್ ತಂತ್ರದಿಂದ ಡೆಲ್ಲಿ ಕ್ಯಾಪಿಟಲ್ಸ್ ರನ್ ಗಳಿಸಿಕೊಳ್ಳಲು ಹರಸಾಹಸಪಟ್ಟಿತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್ 39 (32) ಹಾಗೂ ಎಂ. ಸ್ಟೊಯಿನೀಸ್ 53 (21) ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಮಹಮದ್ ಶಮಿ ಹಾಗೂ ಶೆಲ್ಡೆನ್ ಕಾಟ್ರೇಲ್ ರ ಬೌಲಿಂಗ್ ತಂಡವನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಿತ್ತು. ಮಹಮದ್ ಹಾಗೂ ಶೆಲ್ಡನ್ ತಲಾ 3 ಮತ್ತು 2 ವಿಕೆಟ್ ಗಳನ್ನು ಪಡೆದರು. ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 150 ರನ್ ಗಳಿಕೆ ಮಾಡಿತ್ತು.

ಇತ್ತ ಪಂಜಾಬ್ ತನ್ನ ಆಟವನ್ನು ಒಂದು ಗತ್ತಿನೊಂದಿಗೆ ಪ್ರಾರಂಭ ಮಾಡಿತು. ತಂಡದ ನಾಯಕ ಕೆ.ಎಲ್. ರಾಹುಲ್ 21 (19) ರನ್ ಗಳಿಗೆ ಔಟ್ ಆದಾಗ ತಂಡದ ಗೆಲ್ಲಿಸಲೆಂದು ಮೈದಾನದಲ್ಲಿ‌ ಗಟ್ಟಿಯಾಗಿ ನಿಂತವರು ಕರ್ನಾಟಕದ ಕುವರ ಮಯಾಂಕ್ ಅಗರ್ವಾಲ್. ಇವರು 60 ಎಸೆತಗಳಲ್ಲಿ 89 ರನ್ ಗಳಿಸಿ‌ ತಂಡವನ್ನು ಗೆಲುವಿನ ದಡದವರೆಗೂ ತಂದು ನಿಲ್ಲಿಸಿದರು. ಎಲ್ಲರೂ ಕೇವಲ 20 ರ ಒಳಗೆ ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೂ ಧೃತಿಗೆಡದ ಮಯಾಂಕ್ ತಮ್ಮ ತಂಡಕ್ಕೋಸ್ಕರ ಪೂರ್ಣ ಶ್ರಮ ಹಾಕಿ ಆಟ ಆಡಿದರು. ಕೊನೆಗೆ ಪಂಜಾಬ್ ತಂಡವೂ ಸಹ 20 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು 157 ರನ್ ಗಳನ್ನ ಗಳಿಸಿತ್ತು.

mayank

ಎರಡೂ ತಂಡದ ಆಟಗಾರರು ಸಮ‌ನಾದ ರನ್ ಗಳಿಸಿದ್ದ ಕಾರಣಕ್ಕೆ ಹಾಗೂ ಪಂದ್ಯದ ಕೊನೆಯ ಹಂತದಲ್ಲಿ ಶಮಿಯವರು ರನ್ ಗಳಿಸಲು ವಿಫಲರಾದ್ದರಿಂದ ಆಟವು ಸೂಪರ್ ಓವರ್ ಗೆ ಹೋಯಿತು. ಅದರಲ್ಲಿ ಪೂರನ್ ಹಾಗೂ ರಾಹುಲ್ ಅವರು ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು. ಮೈದಾನಕ್ಕಿಳಿದು ಜಾಣ್ಮೆಯ‌ ಆಟವನ್ನಾಡಿದ ಡೆಲ್ಲಿ ಕ್ಯಾಪಿಟಲ್ಸ್ 3 ರನ್ ಗಳಿಸಿ ತಂಡವನ್ನು ಗೆಲುವಿನ ಮೆಟ್ಟಿಲನ್ನು ಹತ್ತಿಸಿದರು. ಅದ್ಭುತವಾಗಿ ಆಟ ಆಡಿ ತಂಡವನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ್ದ ಪಂಜಾಬ್ ತಂಡದ ಮಯಾಂಕ್ ಅವರ ಸಂಪೂರ್ಣ ಶ್ರಮ ವ್ಯರ್ಥವಾಯಿತು.

Share This Article
Leave a comment