ಕ್ರಿಕೆಟ್ ಜಗತ್ತಿನ ಅತಿದೊಡ್ಡ ‘ಹಬ್ಬ’ ಐಪಿಎಲ್ ದುಬೈನಲ್ಲಿ ಸೆ.೧೯ ರಿಂದ ನ.೧೦ ರ ವರೆಗೆ ನಡೆಯಲಿದೆ. ಈ ನಡುವೆ ಬಿಸಿಸಿಐ ಮಹತ್ವದ ಘೋಷಣೆಯೊಂದನ್ನು ಮಾಡಿದ್ದು ಬೆಂಗಳೂರು ಮೂಲದ ಸಂಸ್ಥೆ ‘ಅನ್ಆಕಾಡೆಮಿ’ ಮುಂದಿನ ಮೂರು ಐಪಿಎಲ್ ಆವೃತ್ತಿಯ ಅಧಿಕೃತ ಪಾಲುದಾರಿಕೆಯನ್ನು ಪಡೆದುಕೊಂಡಿದೆ.
ಭಾರತ- ಚೀನಾ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈ ಹಿಂದೆ ಐಪಿಎಲ್ ಶೀರ್ಷಿಕೆ ಪ್ರಯೋಜಕತ್ವ ಪಡೆದಿದ್ದ ಚೀನಾ ಮೂಲದ ಮೊಬೈಲ್ ಕಂಪನಿ ವಿವೋ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ಕೊನೆಗೊಳಿಸಿತ್ತು. ಆ ನಂತರ ನೂತನ ಶೀರ್ಷಿಕೆ ಪ್ರಾಯೋಜಕತ್ವನ್ನು ಭಾರತೀಯ ಮೂಲದ ಡ್ರೀಮ್ ೧೧ ಸಂಸ್ಥೆ ಪಡೆದುಕೊಂಡಿತ್ತು.
ಇದೀಗ ಅನ್ಆಕಾಡೆಮಿ ಸಂಸ್ಥೆಯು ಟೂರ್ನಿಯ ವ್ಯಾವಹಾರಿಕ ಪಾಲುದಾರಿಕೆಯನ್ನು ಪಡೆದಿದ್ದು, ೨೦೨೦ ರಿಂದ ೨೦೨೩ ರ ಆವೃತ್ತಿಯವರೆಗೆ ಒಪ್ಪಂದ ಜಾರಿಯಲ್ಲಿರಲಿದೆ.
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ