ನಾಳೆಯಿಂದ ಮಂಡ್ಯದಲ್ಲಿ ಪರಿಚಯ ಪುಸ್ತಕ ಹಬ್ಬ: 3 ದಿನ ಪ್ರದರ್ಶನ- ಮಾರಾಟ

Team Newsnap
2 Min Read
Introductory Book Festival at Mandya from tomorrow: 3 days exhibition-sale ನಾಳೆಯಿಂದ ಮಂಡ್ಯದಲ್ಲಿ ಪರಿಚಯ ಪುಸ್ತಕ ಹಬ್ಬ: 3 ದಿನ ಪ್ರದರ್ಶನ- ಮಾರಾಟ

ಸಾಹಿತಿಗಳು ಮತ್ತು ಓದುಗರ ನಡುವೆ ಸಂಪರ್ಕ ಕೊಂಡಿಯಾಗುವ ಜೊತೆಗೆ ಪುಸ್ತಕ ಓದುವ ಹವ್ಯಾಸ ಪಸರಿಸುವ ಉದ್ದೇಶದಿಂದ ಮಂಡ್ಯದಲ್ಲಿ ‘ಪರಿಚಯ’ ಪುಸ್ತಕ ಪ್ರಕಾಶನ ಸಂಸ್ಥೆಯ ವತಿಯಿಂದ ನಾಳೆ (ಜ.7) ಬೆಳಗ್ಗೆ 11-30 ಗಂಟೆಗೆ ‘ಪುಸ್ತಕ ಹಬ್ಬದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕ ಎಂ.ಎನ್. ಶಿವಕುಮಾರ್ ಆರಾಧ್ಯ ತಿಳಿಸಿದ್ದಾರೆ.

ಮಂಡ್ಯದ ವಿವಿ ರಸ್ತೆಯ 2 ನೇ ಕ್ರಾಸ್ ನಲ್ಲಿರುವ ರೈತಬಂಧು ಮಂಡ್ಯ ಫೌಂಡೇಷನ್ ಸಭಾಂಗಣದಲ್ಲಿ ಇಂಡಿಯನ್ ಕಲ್ಚರಲ್ ಕಲೆಕ್ಟಿವ್, ಜಿಲ್ಲಾ ಯುವ ಬರಹಗಾರರ ಬಳಗ,ರೈತಬಂಧು ಮಂಡ್ಯ ಫೌಂಡೇಷನ್ ಹಾಗೂ ಭೂಮಿಬೆಳಗು ಸಾಂಸ್ಕೃತಿಕ ಸಂಘದ ಸಹಯೋಗದೊಂದಿಗೆ ನಡೆಯಲಿರುವ ಪುಸ್ತಕ ಹಬ್ಬಕ್ಕೆ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಚಾಲನೆ ನೀಡಲಿದ್ದಾರೆ.ಕೆಆರ್ ಪೇಟೆ : ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ – 32 ಮಂದಿಗೆ ಗಾಯ

ಮುಖ್ಯ ಅತಿಥಿಗಳಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಆರ್. ಐಶ್ವರ್ಯ, ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ, ವಿಶ್ವಮಾನವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸಿ.ಡಿ. ಕಿರಣ್, ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ . ಯೋಗೇಶ್ ಭಾಗವಹಿಸುವರು.

ಜ. 7 ರಿಂದ 9 ರವರೆಗೆ ಮೂರು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯ ವರೆಗೆ ನಡೆಯಲಿರುವ ಪುಸ್ತಕ ಹಬ್ಬದಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಜೊತೆಗೆ, ಜಿಲ್ಲೆಯ ಸಾಹಿತಿಗಳು ಬರೆದಿರುವ ಕಾವ್ಯ, ಕತೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ, ಸಂಶೋಧನೆ, ವಿಮರ್ಶೆ, ಆತ್ಮಕತೆ, ಜೀವನ ಚರಿತ್ರೆ, ವ್ಯಕ್ತಿತ್ವ ವಿಕಸನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಪುಸ್ತಕಗಳನ್ನು ಶೇ.10 ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಈ ಪುಸ್ತಕ ಹಬ್ಬದಲ್ಲಿ‌ 500 ರೂಗಳಿಗಿಂತ ಹೆಚ್ಚು ಬೆಲೆಯ ಪುಸ್ತಕಗಳನ್ನು ಖರೀದಿಸುವ ಓದುಗರಿಗೆ ಕೂಪನ್ ವಿತರಿಸಿ ಲಕ್ಕಿ ಡ್ರಾ ನಡೆಸಿ ಆಯ್ಕೆಯಾದ ವಿಜೇತರಿಗೆ ಆಕರ್ಷಕ ಬಹುಮಾನ ಸಹ ನೀಡಲಾಗುವುದು. ಹಬ್ಬಕ್ಕೆ ಆಗಮಿಸುವ ಕೆಲವು ಲೇಖಕರನ್ನು ನೇರವಾಗಿ ಭೇಟಿಯಾಗಿ ಅವರು ಬರೆದಿರುವ ಪುಸ್ತಕ ಖರೀದಿ ಮಾಡಿ, ಅವರ ಹಸ್ತಾಕ್ಷರ ಪಡೆಯಲು ‘ರೈಟರ್ಸ್ ಕಾರ್ನರ್’ ಮತ್ತು ಓದುಗರು ‘ತಮ್ಮ ನೆಚ್ಚಿನ ಪುಸ್ತಕ’ದ ಜೊತೆಗೆ ಶೆಲ್ಪಿ ತೆಗೆದುಕೊಳ್ಳುವ ‘ಶೆಲ್ಪಿ ಕಾರ್ನರ್’ ಸ್ಥಾಪಿಸಿ ಓದುಗರಿಗೆ ಸದಾವಕಾಶ ನೀಡಲಾಗಿದೆ.

ಸ್ಥಳದಲ್ಲೇ ‘ಪರಿಚಯ’ ಪುಸ್ತಕ ಪ್ರಕಾಶನಕ್ಕೆ ‘ಸದಸ್ಯತ್ವ’ ಅಭಿಯಾನ ನಡೆಯಲಿದ್ದು, ಸದಸ್ಯತ್ವ ಪಡೆದವರಿಗೆ ವರ್ಷವಿಡೀ ಶೇ.10 ರಿಯಾಯಿತಿ ದೊರೆಯಲಿದೆ. ಆದ್ದರಿಂದ ಜಿಲ್ಲೆಯ ಪುಸ್ತಕ ಪ್ರೇಮಿಗಳು, ವಿದ್ಯಾರ್ಥಿಗಳು, ಯುವಜನರು, ಶಿಕ್ಷಕರು, ಪ್ರಾಧ್ಯಾಪಕರು, ಸಾಹಿತಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ನೆಚ್ಚಿನ ಪುಸ್ತಕಗಳನ್ನು ಖರೀದಿ ಮಾಡುವ ಮೂಲಕ ‘ಪುಸ್ತಕ ಹಬ್ಬ’ವನ್ನು ಯಶಸ್ವಿಯಾಗಿ ಮಾಡಬೇಕೆಂದು ಅವರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9916894417 ಸಂಪರ್ಕಿಸಬಹುದು.

Share This Article
Leave a comment