ಸೋಲ್ : ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಅನಾರೋಗ್ಯದಿಂದಾಗಿ ಕೋಮಾದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಕೊರಿಯಾ ಹೆರಾಲ್ಡ್’ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಈ ಊಹಾಪೋಹಗಳಿಗೆ ಅಲ್ಲಿನ ಸರ್ಕಾರಿ ಮಾಧ್ಯಮ ತೆರೆ ಎಳೆದಿದೆ. ಕಿಮ್ ಅವರು ಕೊರೊನಾ ವೈರಸ್ ಸೋಂಕಿನ ಹಾಗೂ ಚಂಡಮಾರುತ ಕುರಿತು ಎಚ್ಚರಿಕೆ ನೀಡಲು ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿರುವ ವರದಿಯನ್ನು ಕೆಸಿಎನ್‍ಎ ಮಾಧ್ಯಮ ಪ್ರಕಟಿಸಿದೆ.
ಕಿಮ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲಿ ಊಹಾಪೋಹ ಹರಡುತ್ತಿರುವ ಮಧ್ಯೆಯೇ ಈ ವರದಿ ಪ್ರಕಟವಾಗಿದ್ದು, ಕಿಮ್ ಅವರು ಬಿಳಿ ಸೂಟ್ ಧರಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಕೊರಿಯಾದ ‘ರೊಡಾಂಗ್ ಸಿನ್ಮುನ್’ ಪತ್ರಿಕೆ ಸಹ ಪ್ರಕಟಿಸಿದೆ.
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ