Editorial

ಕರ್ನಾಟಕ ಏಕೀಕರಣ

ಕನ್ನಡ.. ಕನ್ನಡಿಗ.. ಕರ್ನಾಟಕ.. ಈ ಮೂರಕ್ಕೂ ನವೆಂಬರ್‌ ಒಂದಕ್ಕೂ ಬಹಳ ಅವಿನಾಭಾವ ಸಂಬಂಧ ಇದೆ. ನವೆಂಬರ್‌ ತಿಂಗಳು ಎಂದರೆ ಕನ್ನಡಿಗರಿಗೆ ಎಲ್ಲಿಲ್ಲದ ಪ್ರೀತಿ.. ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ತನುವು ಕನ್ನಡ.. ಮನವೂ ಕನ್ನಡ ಎಂಬ ವಾತಾವರಣ ಮನೆ ಮಾಡಿರುತ್ತೆ..

ಅಷ್ಟಕ್ಕೂ ನವೆಂಬರ್‌ ಒಂದರ ಮೇಲೆ ಯಾಕಿಷ್ಟು ಪ್ರೀತಿ ಅಂದ್ರೇ ಅವತ್ತೇ ಅಲ್ವಾ ನಮ್ಮ ಭವ್ಯ ಕರ್ನಾಟಕ ರಚನೆಯಾಗಿದ್ದು.. ಹೌದು, 1956 ನವೆಂಬರ್ 1 ಮೈಸೂರು ರಾಜ್ಯ ರೂಪುಗೊಂಡ ದಿನ.. ರಾಜ್ಯಗಳ ಪುನರ್‌ ವಿಂಗಡನೆ ಕಾಯಿದೆಯಡಿ ಜನ್ಮ ತಳೆದ ನವ ರಾಜ್ಯ ಕೇವಲ ಕನ್ನಡ ಭಾಷಾ ಪ್ರದೇಶಗಳ ಏಕೀಕರಣ ಆಗಿದ್ದಿಲ್ಲ.

ಸುಮಾರು 2 ಸಾವಿರ ವರ್ಷಗಳ ಉಜ್ವಲ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿ ಹೊಂದಿದ ಜನತೆಯ ಹೃದಯವನ್ನು ನವೆಂಬರ್‌ 1 ಒಂದುಗೂಡಿಸಿತ್ತು.. ಆಡೋಕೆ ಒಂದೇ ಭಾಷೆ.. ಅದುವೇ ಕನ್ನಡ.. ಇಂದು ಕನ್ನಡಿಗರೆಲ್ಲಾ ಒಟ್ಟಿಗೆ ಇದ್ದೇವೆ. ಇದಕ್ಕೆ ಕಾರಣ ಎಂದರೆ ಕರ್ನಾಟಕದ ಏಕೀಕರಣ. ಈಗಿನ ಕರ್ನಾಟಕ 20ಕ್ಕೂ ಹೆಚ್ಚು ವಿವಿಧ ಪ್ರಾಂತ್ಯಗಳಾಗಿ ಹರಿದು ಹಂಚಿ ಹೋಗಿತ್ತು. ಛಿದ್ರ ಛಿದ್ರವಾಗಿ ಹರಿದು ಯಾವ್ಯಾವುದೋ ಪ್ರಾಂತ್ಯಗಳಿಗೆ ಸೇರಿದ್ದೆಲ್ಲವನ್ನೂ ಒಂದುಗೂಡಿಸಬೇಕು ಅನ್ನೋ ಕಲ್ಪನೆಯೇ ಒಂದು ಅದ್ಭುತ.

ಏಕೀಕರಣ ಚಳುವಳಿ 19ನೇ ಶತಮಾನದ ಎರಡನೇ ಭಾಗದಲ್ಲಿ ಪ್ರಾರಂಭವಾಗಿ 1956ರ ರಾಜ್ಯ ಪುನರ್‌ ವಿಂಗಡಣೆ ಕಾಯಿದೆಯೊಂದಿಗೆ ಮುಕ್ತಾಯವಾಯಿತು. ಕರ್ನಾಟಕ ಏಕೀಕರಣದ ಕನಸನ್ನು ಬಿತ್ತಿ ಕನ್ನಡವನ್ನು ಸಮರ್ಥವಾಗಿ ಕಟ್ಟುವಲ್ಲಿ ಸರ್ ವಾಲ್ಟರ್ ಎಲಿಯಟ್, ಸರ್ ಥಾಮಸ್ ಮನ್ರೋ, ಗ್ರೀನ್ ಹಿಲ್ ಆರ್.

ಗ್ರಾಂಟ್, ಡಬ್ಲ್ಯು. ಎ. ರಸೆಲ್, ಜೆ. ಎಫ್. ಫ್ಲೀಟ್‌ರಂತಹ ಬ್ರಿಟಿಷ್ ಅಧಿಕಾರಿಗಳೂ ಕೂಡ ಕೆಲಸ ಮಾಡಿದರು. ಇವರಿಗೆ ಕೈಜೋಡಿಸಿದ್ದೇ ಕನ್ನಡಿಗರಾದ ಚೆನ್ನಬಸಪ್ಪ, ರಾ.ಹ. ದೇಶಪಾಂಡೆ, ರೊದ್ದ ಶ್ರೀನಿವಾಸರಾವ್, ಆಲೂರು ವೆಂಕಟರಾಯರಂತಹ ಮುಂತಾದ ಹಿರಿಯರು. ಇವರು ಹಾಕಿದ ಬೀಜವೇ ಮೊಳಕೆಯೊಡೆದು ಕರ್ನಾಟಕ ರಾಜ್ಯ ಉದಯವಾಯಿತು.

ರಾ.ಹ.ದೇಶಪಾಂಡೆ ನೇತೃತ್ವದಲ್ಲಿ ವಿದ್ಯಾವರ್ಧಕ ಸಂಘವನ್ನು ಧಾರವಾಡದಲ್ಲಿ ಹುಟ್ಟುಹಾಕಲಾಯಿತು. ಇದು ಕನ್ನಡಕ್ಕಿದ್ದ ಕೆಟ್ಟ ಸ್ಥಿತಿಯನ್ನ ದೂರ ಮಾಡಲು ಸಾಕಷ್ಟು ಶ್ರಮಿಸಿತು. ಅದಾದ ಬಳಿಕ ಹುಟ್ಟಿಕೊಂಡ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಏಕೀಕರಣದ ಹೋರಾಟಕ್ಕೆ ದೊಡ್ಡ ಸ್ಫೂರ್ತಿಯನ್ನೇ ನೀಡಿತು. ಇನ್ನು, ಕರ್ನಾಟಕ ಕುಲ ಪುರೋಹಿತರೆಂದೇ ಕರೆಯಲ್ಪಡುವ ಆಲೂರು ವೆಂಕಟರಾಯರ ಹೋರಾಟ ನಾವು ಮರೆಯಲು ಆಗುವುದೇ ಇಲ್ಲ.

1924ರಲ್ಲಿ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ನೇತೃತ್ವದಲ್ಲಿ ರಾಷ್ಟ್ರೀಯ ಕಾಂಗ್ರೆಸ್​ ಮಹಾಧಿವೇಶನ ನಡೆಯಿತು. ಈ ಸಂದರ್ಭದಲ್ಲಿ ಕರ್ನಾಟಕ ಏಕೀಕರಣಕ್ಕೆ ಚಾಲನೆ ದೊರೆಯಿತು. ಆಗಲೇ ಹುಯಿಲಗೋಳ ನಾರಾಯಣರಾಯರು ರಚಿಸಿದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಮೊದಲ ಬಾರಿಗೆ ಹಾಡಲಾಯಿತು. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣ ಪರಿಷತ್‌ ಹುಟ್ಟಿಕೊಂಡಿತು. ಈ ಪರಿಷತ್ ಏಕೀಕರಣಕ್ಕೆ ಹೊಸ ತಿರುವನ್ನ ನೀಡಿತು.
1953ರಂದು ಕರ್ನಾಟಕ ಏಕೀಕರಣಕ್ಕೆ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಇದಾದ ಬಳಿಕ ಕರ್ನಾಟಕ ಏಕೀಕರಣಕ್ಕಾಗಿ ಜನಾಂದೋಲನ ಹೆಚ್ಚಿ. ನವೆಂಬರ್‌ 1, 1956ರಂದು ಕನ್ನಡ ಭಾಷೆಯಾಡುವ ಹಲವು ಭಾಗಗಳು ಸೇರಿ ಮೈಸೂರು ರಾಜ್ಯ ಉದಯವಾಯಿತು.ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರ ಮೂರ್ತಿ ಅನಾವರಣ

ಆದರೆ, ಏಕೀಕರಣ ಆದಮೇಲೂ ಪ್ರಾಚೀನ ಕಾಲದಿಂದಿದ್ದ ಕರ್ನಾಟಕ ಎಂಬ ಹೆಸರಿನ ಬದಲಾಗಿ ಮೈಸೂರು ರಾಜ್ಯವೆಂದು ಕರೆಯಲ್ಪಟ್ಟಿದ್ದು, ಹಲವರಿಗೆ ಬೇಸರ ಉಂಟುಮಾಡಿತು. ಇದೇ ಕಾರಣಕ್ಕೆ 1973 ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು. ಆದರೆ, ಕಾಸರಗೋಡು, ತಾಳವಾಡಿ, ಮಡಾಕಶಿರಾ, ಜತ್ತ್, ಅಕ್ಕಲಕೋಟೆ, ಸೊಲ್ಲಾಪುರ, ಹೊಸೂರು ಇವೆಲ್ಲವೂ ಏಕೀಕೃತ ರಾಜ್ಯದಿಂದ ಹೊರಗುಳಿದಿವೆ.

Team Newsnap
Leave a Comment

Recent Posts

ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ

2015ರಲ್ಲಿ ಶಿಲ್ಪಾ ಎಂಬುವವರ ಜೊತೆ ಮದುವೆಯಾಗಿದ್ದ ನಟ ಚಂದು ತ್ರಿನಯನಿ ಸೀರಿಯಲ್​ನಲ್ಲಿ ಅಭಿನಯಿಸಿದ್ದ ತೆಲುಗು ನಟ ಚಂದು ನಟಿ ಪವಿತ್ರ… Read More

May 18, 2024

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024