7 ನೇ ವೇತನ ಆಯೋಗದಲ್ಲಿ ‘OPS’ ಅನುಷ್ಟಾನಕ್ಕೆ ಒತ್ತಾಯ : ಸರ್ಕಾರಕ್ಕೆ 7 ದಿನದ ಗಡುವು

Team Newsnap
1 Min Read

ಬಿಜೆಪಿ ಸರ್ಕಾರಕ್ಕೆ ಸರ್ಕಾರಿ ನೌಕರರ ಏಳನೇ ಪರಿಷ್ಕ್ರೃತ ವೇತನ ಹಾಗೂ ಹಳೆ ಪಿಂಚಣಿ ಯೋಜನೆಯ ಅನುಷ್ಠಾನದ ಪಟ್ಟು ನುಂಗಲಾರದ ತುತ್ತಾಗಿದೆ.

ತಮ್ಮ ಪ್ರಮುಖ ಬೇಡಿಕೆಯ ಜಾರಿಗಾಗಿ ನೌಕರರು ಪಟ್ಟು ಹಿಡಿದಿದ್ದಾರೆ, ಫೆ.22 ರಿಂದ ಫೆ.28 ರವರೆಗೆ ಸರ್ಕಾರಕ್ಕೆ 7 ದಿನಗಳ ಗಡುವು ನೀಡಿದ್ದಾರೆ.

ಒಂದೇ ವೇಳೆ ಯೋಜನೆ ಜಾರಿಗೆ ತರದಿದ್ದರೆ ಮಾರ್ಚ್ 1 ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ನೌಕರರು ನಿರ್ಧರಿಸಿದ್ದಾರೆ.

ಇಂದು ನಡೆದ ನೌಕರರ ಸಂಘದ ತುರ್ತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯದ ಸರ್ಕಾರಿ ನೌಕರರು ಬಜೆಟ್ ನಲ್ಲಿ ಸಿಎಂ ಬೊಮ್ಮಾಯಿ ಬಂಪರ್ ನೀಡುವ ನಿರೀಕ್ಷೆಯಲ್ಲಿದ್ದರು. 7ನೇ ವೇತನ ಆಯೋಗದ ಬಗ್ಗೆ ಸಿಎಂ ಪ್ರಸ್ತಾಪಿಸುತ್ತಾರೆ ಅಂತ ಅಂದುಕೊಂಡಿದ್ದರು. ಆದರೆ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ.ಇದರಿಂದ ಸರ್ಕಾರಿ ನೌಕರರು ಇನ್ನಷ್ಟು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

Share This Article
Leave a comment