January 11, 2025

Newsnap Kannada

The World at your finger tips!

0ee0e447 a38d 469b a8ee 836e1646b0d8

ವಿಚಾರಣೆ ನೆಪ – ವಿವಸ್ತ್ರಗೊಳಿಸಿದ ಪೋಲೀಸರು: ಬೆದರಿ ಆತ್ಮಹತ್ಯೆ ಮಾಡಿ ಕೊಂಡ ಯುವತಿ

Spread the love

ಪೊಲೀಸರು ಪ್ರಕರಣ ವಿಚಾರಣೆಯ ನೆಪದಲ್ಲಿ 22 ವರ್ಷದ ಯುವತಿಯರನ್ನು ಬೆತ್ತಲೆ ಹಿಂಸೆ ಮಾಡುತ್ತಿದ್ದ ಕಾರಣಕ್ಕಾಗಿ ಹಿಂಸೆಯ ಭಯಕ್ಕೆ ಹೆದರಿ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ.

ಪೊಲೀಸ್ ಠಾಣೆಯ ಪೋಲಿಸರ ಕೃತ್ಯ ಖಂಡಿಸಿ ಪೋಷಕರು ಮಗಳ ಶವ ಪಡೆಯಲು ಹಿಂದೇಟು ಹಾಕಿ ಪ್ರತಿಭಟನೆ ಮಾಡುತ್ತಿದ್ದಾರೆ.

ಯುವತಿ ರಾಜೇಂದ್ರ ಪಾರ್ಕ್ ನಲ್ಲಿ ಕುಟುಂಬದ ಜೊತೆ ವಾಸವಾಗಿದ್ದಳು. ಯುವತಿ ಕುಟುಂಬ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದಾಳೆ. ಪೊಲೀಸರು ಮನೆಯವರನ್ನು ಠಾಣೆಗೆ ಕರೆಸಿ ವಿಚಾರಣೆಗೆ ನಡೆಸಿದ್ದರು. ಆ ವೇಳೆ ಪೊಲೀಸರು ಮೂರನೇ ದರ್ಜೆ ಟಾರ್ಚರ್ ನೀಡುತ್ತಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಯುವತಿ ಆಕೆ ಮಾವನನ್ನ ಬೆತ್ತಲೆಗೊಳಿಸಿ ಪೊಲೀಸರು ಥಳಿಸಿದ್ದರು.ವಿಚಾರಣೆ ಯಿಂದ ಹೊರ ಬಂದ ಮಗಳು ಪೊಲೀಸರ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಫರೀದಾಬಾದ್ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಈ ಕುಟುಂಬಕ್ಕೆ ವಿಚಾರಣೆ ನೆಪದಲ್ಲಿ ನೀಡುತ್ತಿರುವ ಕಿರುಕುಳದ ಬಗ್ಗೆ ವರದಿ ಮಾಡಲು ಬಂದ ಪತ್ರಕರ್ತನನ್ನು ಸಹ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!