December 19, 2024

Newsnap Kannada

The World at your finger tips!

injury , sports , cricket

Injury to Rohit: unavailable for the important match..? Rahul - Kohli who became the captain of Team India ರೋಹಿತ್ ಗೆ ಗಾಯ: ಮಹತ್ವದ ಪಂದ್ಯಕ್ಕೆ​ ಅಲಭ್ಯ..? ಟೀಂ ಇಂಡಿಯಾ ಕ್ಯಾಪ್ಟನ್​ ಪಟ್ಟ ರಾಹುಲ್ - ಕೊಹ್ಲಿಗೆ

ರೋಹಿತ್ ಗೆ ಗಾಯ: ಮಹತ್ವದ ಪಂದ್ಯಕ್ಕೆ​ ಅಲಭ್ಯ..? ಟೀಂ ಇಂಡಿಯಾ ಕ್ಯಾಪ್ಟನ್​ ಪಟ್ಟ ರಾಹುಲ್ – ಕೊಹ್ಲಿಗೆ

Spread the love

ಆಸ್ಟ್ರೇಲಿಯಾದ ಅಡಿಲೇಡ್​ನ ಓವಲ್ ಇಂಟರ್​ನ್ಯಾಷನಲ್​​ ಕ್ರಿಕೆಟ್​ ಮೈದಾನದಲ್ಲಿ ಗುರುವಾರ ನಡೆಯುವ ಈ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾಗೆ ಆಘಾತ ಎದುರಾಗಿದೆ. ಕ್ಯಾಪ್ಟನ್ ರೋಹಿತ್​ ಶರ್ಮಾ ಗಾಯಗೊಂಡಿದ್ದು, ವಿಶ್ವಕಪ್ ಟೂರ್ನಿಯಿಂದಲೇ ಹೊರಬೀಳೋ ಆತಂಕ ಎದುರಾಗಿದೆ.

ಇಂದು ನೆಟ್​ ಪ್ರ್ಯಾಕ್ಟೀಸ್ ಮಾಡುವ ಸಂದರ್ಭದಲ್ಲಿ ಶರ್ಮಾ ಕೈಗೆ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ನಾಡಿದ್ದು ಸೆಮಿಫೈನಲ್​ ಪಂದ್ಯವನ್ನು ಬಲಿಷ್ಠ ಇಂಗ್ಲೆಂಡ್​ ವಿರುದ್ಧ ಭಾರತ ತಂಡ ಆಡಲಿದೆ. ಮತ್ತೆ ಮುಂದಿನ ಸಿಎಂ ಸಿದ್ದರಾಮಯ್ಯ: ಹುಬ್ಬಳ್ಳಿಯಲ್ಲಿ ಮೊಳಗಿದ ಘೋಷಣೆ

ಇವತ್ತು ಬೆಳಗ್ಗೆ ಅಡಿಲೇಡ್​ನ ಓವಲ್​ ಸ್ಟೇಡಿಯಂನ ನೆಟ್​ನಲ್ಲಿ ಬ್ಯಾಟಿಂಗ್​ ಪ್ರ್ಯಾಕ್ಟೀಸ್ ಮಾಡ್ತಿರುವಾಗ ಬಲಗೈನ ಮುಂಗೈಗೆ ಬಾಲ್ ಬಡಿದು ಗಾಯವಾಗಿದೆ ತೀವ್ರ ನೋವಿಗೆ ಕಾರಣವಾಗಿದೆ. ತಕ್ಷಣ ಅಲ್ಲಿನ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದಾರೆ.

ವೈದ್ಯಾಧಿಕಾರಿಗಳು ಶರ್ಮಾ ಅವರಿಗೆ ಚಿಕಿತ್ಸೆಯನ್ನು ಮುಂದುವರಿಸಿದ್ದಾರೆ. ಸೆಮಿಫೈನಲ್​​ನಲ್ಲಿ ರೋಹಿತ್ ಶರ್ಮಾ ಆಡ್ತಾರಾ? ಇಲ್ಲವೋ ಎಂಬುವುದು ಸದ್ಯದಲ್ಲೇ ಗೊತ್ತಾಗಲಿದೆ.

ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆ ​ ಒಂದು ವೇಳೆ ರೋಹಿತ್​ ಶರ್ಮಾ ಅಲಭ್ಯರಾದ್ರೆ, ಟೀಂ ಇಂಡಿಯಾ ಮುಂದಿನ ಕ್ಯಾಪ್ಟನ್​ ಯಾರು ? ಸದ್ಯ ತಂಡದ ಉಪ ನಾಯಕ ಕೆ.ಎಲ್​​ ರಾಹುಲ್​​​ ಟೀಂ ಇಂಡಿಯಾ ಕ್ಯಾಪ್ಟನ್​ ಆಗಬಹುದು ಅಥವಾ ಅನುಭವಿ ಕ್ಯಾಪ್ಟನ್​​ ವಿರಾಟ್​ ಕೊಹ್ಲಿಗೆ ಕೋಚ್​ ದ್ರಾವಿಡ್​​ ಮಣೆ ಹಾಕಬಹುದಾಗಿದೆ.

Copyright © All rights reserved Newsnap | Newsever by AF themes.
error: Content is protected !!