December 23, 2024

Newsnap Kannada

The World at your finger tips!

sonia,death,twist

Injury mark found on Sonali Phogat's body - Arrest of two accomplices ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

ಸೋನಾಲಿ ಫೋಗಟ್ ದೇಹದ ಮೇಲೆ ಗಾಯದ ಗುರುತು ಪತ್ತೆ – ಇಬ್ಬರು ಸಹಚರರ ಬಂಧನ

Spread the love

ಗೋವಾದಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಬಿಜೆಪಿ ನಾಯಕಿ, ನಟಿ ಸೋನಾಲಿ ಫೋಗಟ್ ಮೃತ ದೇಹದ ಮೇಲೆ ಹಲವು ಗಾಯಗಳಿವೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಉಲ್ಲೇಖಿಸಿದ ನಂತರ ಗೋವಾ ಪೊಲೀಸರು ಸೋನಾಲಿಯ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.

ಆಗಸ್ಟ್ 22ರಂದು ಫೋಗಟ್ ಗೋವಾಕ್ಕೆ ಆಗಮಿಸಿದಾಗ ಅವರ ಜೊತೆಗಿದ್ದ ಸುಧೀರ್ ಸಗ್ವಾನ್ ಮತ್ತು ಸುಖ್ವಿಂದರ್ ವಾಸಿ ಆರೋಪಿಗಳೆಂದು ಪೊಲೀಸರು ಬಂಧಿಸಿದ್ದಾರೆ.ಇದನ್ನು ಓದಿ –ಚಾಮುಂಡಿ ಬೆಟ್ಟದಲ್ಲಿ ಡಿಜಿಟಲ್ ಹುಂಡಿ ವ್ಯವಸ್ಥೆ ಜಾರಿ: ಸ್ಕ್ಯಾನ್ ಮಾಡಿ ಕಾಣಿಕೆ ನೀಡಿ

ಸೋನಾಲಿ ಸಾವಿನ ಕುರಿತಾಗಿ ಆಕೆಯ ಸಹೋದರ ರಿಂಕು ಧಾಕಾ ಅನುಮಾನ ವ್ಯಕ್ತಪಡಿಸಿ ಬುಧವಾರ ಅಂಜುನಾ ಪೊಲೀಸ್ ಠಾಣೆಯಲ್ಲಿ ಆರೋಪಿಗಳಿಬ್ಬರ ವಿರುದ್ಧ ದೂರು ದಾಖಲಿಸಿದ್ದರು.


ಆ ಬಳಿಕ ಸೋನಾಲಿ ಫೋಗಟ್‌ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಫೋರೆನ್ಸಿಕ್ ತಜ್ಞರ ಸಮಿತಿಯು ಶವವನ್ನು ಶವಪರೀಕ್ಷೆ ನಡೆಸಿತು. ಈ ವರದಿಯಲ್ಲಿ ಹರಿತವಾದ ಆಯುಧದಿಂದ ಇರಿದಿರುವ ಗಾಯದ ಗುರುತು ಪತ್ತೆಯಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ.

ಸೊನಾಲಿ ಫೋಗಟ್ 2019ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಹಿಸಾರ್ ಜಿಲ್ಲೆಯ ಆದಂಪುರ ಕ್ಷೇತ್ರದಿಂದ ಕುಲ್‍ದೀಪ್ ಬಿಷ್ಣೋಯಿ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದರು.

ಟಿಕ್ ಟಾಕ್‍ನಲ್ಲಿ ಜನಪ್ರಿಯರಾಗಿದ್ದ ಅವರು, 14ನೇ ಆವೃತ್ತಿಯ `ಬಿಗ್‍ಬಾಸ್’ ರಿಯಾಲಿಟಿ ಶೋದಲ್ಲಿ ಸ್ಪರ್ಧಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!