‘ಇಂಡುವಾಳು ಆದರ್ಶ ಗ್ರಾಮ’ ಯೋಜನೆಗೆ ಸೇರ್ಪಡೆ : ಸಹಕಾರ ನೀಡಿ ಸಂಸದೆ ಸುಮಲತಾ

Team Newsnap
2 Min Read

ಮಂಡ್ಯ ತಾಲೂಕು ಇಂಡುವಾಳು ಗ್ರಾಮವನ್ನು ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ, ಮಂಡ್ಯ ಜಿಲ್ಲೆಯಲ್ಲಿ ಇಂಡುವಾಳು ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಗ್ರಾಮದವರ ಸಹಕಾರ ಅಗತ್ಯವಿದೆ ಎಂದು ಸಂಸದರಾದ ಸುಮಲತಾ ಅಂಬರೀಶ್ ರವರು ತಿಳಿಸಿದರು.

ಇಂಡವಾಳು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ನಡೆದ ಸಂಸದರ ಆದರ್ಶ ಗ್ರಾಮ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಸಂಸದೆ ಮಾತನಾಡಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಿ. ಗ್ರಾಮದ ಸಮಸ್ಯೆಗಳು ಹಾಗೂ ಬೇಡಿಕೆಗಳು ಇದ್ದಲ್ಲಿ ಗಮನಕ್ಕೆ ತರುವಂತಹ ಕೆಲಸ ಮಾಡಿ. ಈ ಯೋಜನೆಯಡಿ ಇರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಹೇಳಿದರು.

ರಸ್ತೆ, ಒಳಚರಂಡಿ, ಶಾಲೆ, ಪ್ರವಾಸಿ ತಾಣಗಳು, ವಸತಿ, ಸ್ಮಶಾನ, ಶೌಚಾಲಯ ಹಾಗೂ ಇನ್ನಿತರೆ ಕಾಮಗಾರಿಗಳನ್ನು‌ ಆದರ್ಶ ಗ್ರಾಮದ ಯೋಜನೆಯಡಿ ತೆಗೆದುಕೊಳ್ಳಲು ಅವಕಾಶವಿದೆ. ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಜಲ ಜೀವನ್ ಮೀಷನ್ ಯೋಜನೆ ಪ್ರತಿ ಮನೆಗೂ ನೀರು ತಲುಪುವ ಯೋಜನೆಯಾಗಿದೆ. ಈ ಯೋಜನೆ ಕ್ರಮಬದ್ಧವಾಗಿ ಅನುಷ್ಠಾನವಾಗಬೇಕು ಎಂದರು. ಜೋಡೋ ಯಾತ್ರೆ ನಂತರ ಕೃಷ್ಣ ಯಾತ್ರೆ – ನನ್ನದೇ ನೇತೃತ್ವ : ಡಿಕೆಶಿ ಪ್ರಕಟ

ಇದೇ ಸಂದರ್ಭದಲ್ಲಿ ಜಿ.ಪಂ. ಸಿಇಒ ಶಾಂತ ಎಲ್.ಹುಲ್ಮನಿ ರವರು ಮಾತನಾಡಿ ಇಂಡುವಾಳು ಗ್ರಾಮದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ ಇತರೆ ಗ್ರಾಮಗಳಿಗೆ ಮಾದರಿಯಾಗಿ ಸಂಪೂರ್ಣ ಅಭಿವೃದ್ಧಿಯಾಗುವಂತೆ ಮಾಡಬೇಕು. ಇದೇ ಆದರ್ಶ ಗ್ರಾಮದ ಪರಿಕಲ್ಪನೆ ಎಂದರು .

SUMALATHA I

ಅಭಿವೃದ್ಧಿ ಕೆಲಸಗಳ ಜೊತೆ, ಲಿಂಗ ಸಮಾನತೆ, ಸ್ತ್ರೀಯರನ್ನು ಗೌರವಿಸುವುದು, ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳುವುದು, ಕಾಯಕವೇ ಕೈಲಾಸ, ಸ್ವಚ್ಛತೆಯ ಸಂಸ್ಕೃತಿಯನ್ನು ಉತ್ತೇಜಿಸುವುದು, ಪ್ರಕೃತಿಯೊಂದಿಗೆ ಸ್ಪಂದಿಸುತ್ತಾ ಪರಿಸರ ಮತ್ತು ವಿಜ್ಞಾನದ ಸಮತೋಲನವನ್ನು ಖಾತರಿಪಡಿಸಿಕೊಳ್ಳುವುದು, ಸ್ಥಳೀಯ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಉತ್ತೇಜಿಸುವುದು, ಗ್ರಾಮದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಬೆಳೆಸುವ ಮೌಲ್ಯಯುತ ಕೆಲಸಗಳು ಸಹ ನಡೆಯಬೇಕು ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳನ್ನು ಗುರುತಿಸಿ ಪ್ರವಾಸಿ ತಾಣಗಳಿಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರಿನ ಸೌಲಭ್ಯ, ಪ್ರವಾಸಿ ಸೂಚನಾ ಫಲಕಗಳು ಬಗ್ಗೆ ಅಳವಡಿಸುವ ಕೆಲಸ ನಡೆಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್ ಅಶ್ವತಿ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ ,ಪಾಂಡವಪುರ ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದಮೂರ್ತಿ, ಜಿ.ಪಂ.ಉಪ ಕಾರ್ಯದರ್ಶಿ ಸಂಜೀವಪ್ಪ, ತಹಶೀಲ್ದಾರ್ ಮಹಮ್ಮದ್ ಕುಂಞಿ,
ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share This Article
Leave a comment