February 22, 2026

Newsnap Kannada

The World at your finger tips!

yuvaraj

ಯುವರಾಜ್ ಸ್ವಾಮಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Spread the love

ಯುವರಾಜ್ ಸ್ವಾಮಿ ವಿರುದ್ಧ ಬೆಂಗಳೂರು ಸಿಸಿಬಿ ಪೊಲೀಸರು ದೋಷಾರೋಪ ( ಚಾರ್ಜ್ ಶೀಟ್) ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ

ಕೆಲವು ಸಚಿವರ ವೈಯಕ್ತಿಕ ವಿವರ, ಹಾಗೂ ಲೆಟರ್ ಹೆಡ್ ಪತ್ತೆಯಾಗಿವೆ. ಅಲ್ಲದೆ ಆರೋಪಿ ಹೇಗೆ ವಂಚನೆ ಮಾಡಿದ್ದಾನೆ ಎಂಬುದರ ವಿವರವನ್ನು ಸಹ ಆರೋಪ ಪಟ್ಟಿಯಲ್ಲಿ ವಿವರವಾಗಿ ಹೇಳಲಾಗಿದೆ.

ಸಚಿವ ಮುರಗೇಶ್ ನಿರಾಣಿ ಲೇಟರ್ ಹೆಡ್ ಮತ್ತು ಬಯೋಡೆಟಾ, ಪ್ರಮೋದ್ ಮಧ್ವರಾಜ್ ಲೇಟರ್ ಹೆಡ್, ಬಯೋಡೆಟಾ, ಉಮೇಶ್ ಕತ್ತಿಯವರ ಲೇಟರ್ ಹೆಡ್, ಬಯೋಡೆಟಾ ಹಾಗೂ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಕೆಲ ದಾಖಲೆಗಳನ್ನು ಸಹ ಸೀಜ್ ಮಾಡಲಾಗಿದೆ.

ಮುತ್ತಪ್ಪ ರೈಗೆ ಸೆಕ್ಯೂರಿಟಿ ಕೋರಿ ಶ್ರೀರಾಮುಲು ಹೆಸರಲ್ಲಿ ಪತ್ರ ಬರೆದಿರುವುದು ಸಹ ಸಿಕ್ಕಿದೆ. ಶ್ರೀರಾಮುಲು ಲೇಟರ್ ಹೆಡ್ ನಲ್ಲಿ ಗೃಹ ಇಲಾಖೆಗೆ ಪತ್ರ ಬರೆಯಲಾಗಿದೆ.

error: Content is protected !!