ಚೀನಾ-ಪಾಕ್‌ಗೆ ಸೆಡ್ಡು ಹೊಡೆದ ಭಾರತದ ನಾಗ್ ಕ್ಷಿಪಣಿ ಪ್ರಯೋಗ

Team Newsnap
1 Min Read

ಭಾರತದ ಸೇನೆಯ ಬಲವನ್ನು ವರ್ಧಿಸುವ ನಿಟ್ಟಿನಲ್ಲಿ‌ ಇಂದು ನಾಗ್ ಕ್ಷಿಪಣಿಯನ್ನು ಇಂದು ಬೆಳಿಗ್ಗೆ ರಾಜಸ್ಥಾನದ ಪೋಖ್ರಾನ್‌ನಲ್ಲಿ 6:45ಕ್ಕೆ ಅತ್ಯಂತ‌ ಯಶಸ್ವಿಯಾಗಿ‌ ಪ್ರಯೋಗಿಸಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಈ ವೈರಿಗಳ ಸಮರ ಟ್ಯಾಂಕರ್ ಗಳು ಇತರ ಅಗಾಧ ಶಸ್ತ್ರ ಸುಸಜ್ಜಿತ ವಾಹನಗಳನ್ನು ಕ್ಷಣಾರ್ಧದಲ್ಲೇ ಧ್ವಂಸಗೊಳಿಸಬಲ್ಲ ಕ್ಷಿಪಣಿಯನ್ನು ಪೂರ್ಣ ದೇಶೀಯವಾಗಿ ನಿರ್ಮಿಸಿದೆ.

ಪಾಕಿಸ್ತಾನ ಹಾಗೂ ಚೀನಾದಿಂದ ದಿನೇ ದಿನೇ ಗಡಿ ತಂಟೆ‌ ಎದುರಾಗುತ್ತಿದೆ. ಅದಕ್ಕೆ ದಿಟ್ಟ ಉತ್ತರ ನೀಡುವ ದಿಸೆಯಲ್ಲಿ‌ ನಾಗ್ – ಆ್ಯಂಟಿ‌ ಟ್ಯಾಂಕ್ ಗೈಡೆಡ್ ಮಿಸೈಲ್‌ನ್ನು ಭಾರತೀಯ‌ ಸೇನೆಗೆ ಸೇರಿಸಲಾಗಿದೆ. ಇದನ್ನು ನೆಲದಿಂದ ಹಾಗೂ ವಾಯುನೆಲೆಯಿಂದ ಈ ಕ್ಷಿಪಣಿಯನ್ನು ನಿಖರ ಗುರಿಯತ್ತ ಉಡಾಯಿಸಬಹುದಾಗಿದೆ.

ಹಗಲು ಮತ್ತು ರಾತ್ರಿ ವೇಳೆ ನಾಗ್ ಕ್ಷಿಪಣಿ ಕಾರ್ಯ ನಿರ್ವಹಿಸುತ್ತದೆ. ನಿಖರ ಗುರಿ ತಲುಪಲು ಅತ್ಯಾಧುನಿಕ ಮಾರ್ಗದರ್ಶಿ ವ್ಯವಸ್ಥೆ , ಇನ್ಫಾರೆಡ್ ಕಿರಣ ಮತ್ತು ಏರಿಯೋನಿಕ್ಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಸಿಡಿ ತಲೆಗಳನ್ನು ಹೊಂದಿರುವ ಈ ಕ್ಷಿಪಣಿ 8 ಕಿ.ಮೀ ದೂರದಲ್ಲಿರುವ ವೈರಿಗಳ ಟ್ಯಾಂಕ್‍ಗಳು ಮತ್ತು ಸಶಸ್ತ್ರ ವಾಹನಗಳನ್ನು ನುಚ್ಚು ನೂರು ಮಾಡುವ ಅಗಾಧ ಸಾಮರ್ಥ್ಯ ಹೊಂದಿದೆ.

ಅಮೆರಿಕಾ, ರಷ್ಯಾ, ಫ್ರಾನ್ಸ್ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಯುದ್ಧ ಟ್ಯಾಂಕ್ ಧ್ವಂಸಕ ಕ್ಷಿಪಣಿಗಳಿವೆ. 2018ರಲ್ಲಿ 200 ನಾಗ್ ಎಟಿಜಿಎಂಗಳನ್ನು ಹೊಂದಲು ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿತ್ತು.

Share This Article
Leave a comment