ಅಂತಾರಾಷ್ಟ್ರೀಯ

ಭಾರತದ ಚಂದ್ರಯಾನ -3 : ನಾಳೆ ಶ್ರೀಹರಿ ಕೋಟಾದಿಂದ ಉಡಾವಣೆ

ಬೆಂಗಳೂರು :ಭಾರತದ ಇಸ್ರೋ ವಿಜ್ಞಾನಿಗಳ ಮಹತ್ವಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಗಂಟೆಗಳ ಗಣನೆ ಆರಂಭವಾಗಿದೆ.

ನಾಳೆ (ಜು. 14) ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್​​​​ಗೆ ಲ್ಯಾಂಡರ್ ಮತ್ತು ರೋವರ್​​ ಮಷಿನ್​ಗಳನ್ನು ಹೊತ್ತು ಬಾಹುಬಲಿ ರಾಕೆಟ್ LVM-III (Launch Vehicle Mark-III) ಆಕಾಶಕ್ಕೆ ನಗೆಯಲಿದೆ.

ಈ ಬಾರಿಯ ಚಂದ್ರಯಾನ-3 ಸಂಪೂರ್ಣ ಮೇಕ್​ ಇನ್ ಇಂಡಿಯಾ ಅಡಿಯಲ್ಲಿ ನಡೆಯುತ್ತಿದೆ. ಉಡಾವಣೆಗೆ ದೇಶಿಯವಾಗಿ ನಿರ್ಮಿಸಿರುವ ಲಾಂಚಿಂಗ್ ವೆಹಿಕಲ್ ಬಳಸಲಾಗುತ್ತಿದೆ. ಮಾತ್ರವಲ್ಲ, ಲ್ಯಾಂಡರ್ ಮತ್ತು ರೋವರ್​​ಗಳು ಕೂಡ ದೇಶಿಯವಾಗಿಯೇ ನಿರ್ಮಾಣ ಮಾಡಲಾಗಿದೆ.

2019ರಲ್ಲಿ ಇಸ್ರೋ ಚಂದ್ರಯಾನ-2 ಉಡ್ಡಯನ ಮಾಡಿತ್ತು. ಚಂದ್ರನ ಅಂಗಳ ತಲುಪುವಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಆದರೆ ಚಂದ್ರನ ಸ್ಪರ್ಷ ಮಾಡುವ ಸಂದರ್ಭದಲ್ಲಿ ಸಾಫ್ಟ್​ ಲ್ಯಾಂಡ್ ಆಗದ ಹಿನ್ನೆಲೆಯಲ್ಲಿ, ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ – 2 ವಿಫಲವಾಗಿತ್ತು. ಹಳೆಯ ತಪ್ಪುಗಳನ್ನು ತಿದ್ದುಕೊಂಡಿರುವ
ಇಸ್ರೋ ವಿಜ್ಞಾನಿಗಳು ಈ ಬಾರಿ ಸಾಫ್ಟ್​ ಲ್ಯಾಂಡಿಂಗ್​​ಗೆ ಹೆಚ್ಚು ಒತ್ತು ನೀಡಿದ್ದಾರೆ.

ತಿರುಪತಿ🙁 ಚಂದ್ರಯಾನ-3 ) ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿತು.ಇಂದು ಮುಂಜಾನೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.

ಚಂದ್ರನಿದ್ದಲ್ಲಿ ಹೋಗಲು ಎಷ್ಟು ದಿನ ಬೇಕು..?

2019ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-2 ಮಷಿನ್, ಚಂದ್ರನಿದ್ದಲ್ಲಿಗೆ ತಲುಪಲು ಬರೋಬ್ಬರಿ 48 ದಿನಗಳನ್ನು ತೆಗೆದುಕೊಂಡಿತ್ತು. ಅಂದರೆ ಜುಲೈ 22, 2019ರಂದು ಶ್ರೀಹರಿಕೋಟಾದಿಂದ ರಾಕೆಟ್ ಉಡಾಯಿಸಲಾಗಿತ್ತು. ಇದು ಅಗಸ್ಟ್​ 20, 2019 ರಂದು ಚಂದ್ರನ ಕಕ್ಷೆಯನ್ನು ತಲುಪಿತ್ತು.

ಚಂದ್ರ ಮತ್ತು ಭೂಮಿಗೆ ಬರೋಬ್ಬರಿ 384400 ಕಿಲೋ ಮೀಟರ್ ದೂರ ಇರೋದ್ರಿಂದ ಇಷ್ಟೊಂದು ಸಮಯ ತೆಗೆದುಕೊಂಡಿತ್ತು. ಅದರಂತೆ ಈ ಬಾರಿಯೂ ಕೂಡ ಚಂದ್ರನ ತಲುಪಲು ದೀರ್ಘ ಕಾಲ ತೆಗೆದುಕೊಳ್ಳಲಿದೆ.

ಈ ಬಾರಿಯ ಚಂದ್ರಯಾನ-3 ಜರ್ನಿಯು ಜುಲೈ 14 ರಿಂದ ಆರಂಭಗೊಳ್ಳಲಿದೆ. ಈ ಬಾರಿಯೂ ಕೂಡ ಚಂದ್ರಯಾನ-3 ಮಷಿನ್ ಚಂದ್ರನ ತಲುಪಲು 45 ರಿಂದ 48 ದಿನಗಳ ಕಾಲ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳ ಪ್ರಕಾರ, ಆಗಸ್ಟ್ 23 ಅಥವಾ 24 ರಂದು ಲ್ಯಾಂಡ್ ಆಗುವ ಸಾಧ್ಯತೆ ಇದೆ.

Team Newsnap
Leave a Comment
Share
Published by
Team Newsnap

Recent Posts

SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ

ಬೆಂಗಳೂರು : ಶಿಕ್ಷಣ ಸಚಿವ ಮಧು ಬಂಗಾರಪ್ಪ , ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು… Read More

May 17, 2024

ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು : ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ… Read More

May 17, 2024

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯವನ್ನು ಬಜೆಟ್‌ನಲ್ಲಿ ಘೋಷಣೆ… Read More

May 16, 2024

ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ… Read More

May 16, 2024

ಹಾಸನ : ಮೀನು ಹಿಡಿಯಲು ಹೋಗಿದ್ದ ಒಂದೇ ಗ್ರಾಮದ 4 ಮಕ್ಕಳು ಜಲ ಸಮಾಧಿ

ಹಾಸನ : ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ನಾಲ್ಕು ಮಕ್ಕಳು ಜಲ ಸಮಾಧಿ ಆದ ಘಟನೆ ಆಲೂರು ತಾಲೂಕಿನ, ತಿಮ್ಮನಹಳ್ಳಿ… Read More

May 16, 2024

ಪ್ರಜ್ವಲ್ ಪೆಂಡ್ರೈವ್ ಪ್ರಕರಣ : 10 ಪೆನ್ ಡ್ರೈವ್ ಪ್ರೀತಂ ಗೌಡ ಆಪ್ತರ ಮನೆಯಲ್ಲಿ ಪತ್ತೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ ಆಪ್ತರ… Read More

May 16, 2024