ಬೆಂಗಳೂರು :ಭಾರತದ ಇಸ್ರೋ ವಿಜ್ಞಾನಿಗಳ ಮಹತ್ವಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಗಂಟೆಗಳ ಗಣನೆ ಆರಂಭವಾಗಿದೆ.
ನಾಳೆ (ಜು. 14) ಮಧ್ಯಾಹ್ನ 2 ಗಂಟೆ 35 ನಿಮಿಷದ 17 ಸೆಕೆಂಡ್ಗೆ ಲ್ಯಾಂಡರ್ ಮತ್ತು ರೋವರ್ ಮಷಿನ್ಗಳನ್ನು ಹೊತ್ತು ಬಾಹುಬಲಿ ರಾಕೆಟ್ LVM-III (Launch Vehicle Mark-III) ಆಕಾಶಕ್ಕೆ ನಗೆಯಲಿದೆ.
ಈ ಬಾರಿಯ ಚಂದ್ರಯಾನ-3 ಸಂಪೂರ್ಣ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಡೆಯುತ್ತಿದೆ. ಉಡಾವಣೆಗೆ ದೇಶಿಯವಾಗಿ ನಿರ್ಮಿಸಿರುವ ಲಾಂಚಿಂಗ್ ವೆಹಿಕಲ್ ಬಳಸಲಾಗುತ್ತಿದೆ. ಮಾತ್ರವಲ್ಲ, ಲ್ಯಾಂಡರ್ ಮತ್ತು ರೋವರ್ಗಳು ಕೂಡ ದೇಶಿಯವಾಗಿಯೇ ನಿರ್ಮಾಣ ಮಾಡಲಾಗಿದೆ.
2019ರಲ್ಲಿ ಇಸ್ರೋ ಚಂದ್ರಯಾನ-2 ಉಡ್ಡಯನ ಮಾಡಿತ್ತು. ಚಂದ್ರನ ಅಂಗಳ ತಲುಪುವಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಆದರೆ ಚಂದ್ರನ ಸ್ಪರ್ಷ ಮಾಡುವ ಸಂದರ್ಭದಲ್ಲಿ ಸಾಫ್ಟ್ ಲ್ಯಾಂಡ್ ಆಗದ ಹಿನ್ನೆಲೆಯಲ್ಲಿ, ಭಾರತದ ಮಹತ್ವಕಾಂಕ್ಷೆಯ ಚಂದ್ರಯಾನ – 2 ವಿಫಲವಾಗಿತ್ತು. ಹಳೆಯ ತಪ್ಪುಗಳನ್ನು ತಿದ್ದುಕೊಂಡಿರುವ
ಇಸ್ರೋ ವಿಜ್ಞಾನಿಗಳು ಈ ಬಾರಿ ಸಾಫ್ಟ್ ಲ್ಯಾಂಡಿಂಗ್ಗೆ ಹೆಚ್ಚು ಒತ್ತು ನೀಡಿದ್ದಾರೆ.
ತಿರುಪತಿ🙁 ಚಂದ್ರಯಾನ-3 ) ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥಿಸಿತು.ಇಂದು ಮುಂಜಾನೆ ಇಸ್ರೋದ ವೈಜ್ಞಾನಿಕ ಕಾರ್ಯದರ್ಶಿ ಶಾಂತನು ಭಟ್ವಾಡೇಕರ್ ಜೊತೆ ಇಸ್ರೋ ವಿಜ್ಞಾನಿಗಳು ಚಂದ್ರಯಾನ 3 ಮಾದರಿಯೊಂದಿಗೆ ಆಗಮಿಸಿ ಪ್ರಾರ್ಥನೆ ಮಾಡಿದರು.
ಚಂದ್ರನಿದ್ದಲ್ಲಿ ಹೋಗಲು ಎಷ್ಟು ದಿನ ಬೇಕು..?
2019ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ-2 ಮಷಿನ್, ಚಂದ್ರನಿದ್ದಲ್ಲಿಗೆ ತಲುಪಲು ಬರೋಬ್ಬರಿ 48 ದಿನಗಳನ್ನು ತೆಗೆದುಕೊಂಡಿತ್ತು. ಅಂದರೆ ಜುಲೈ 22, 2019ರಂದು ಶ್ರೀಹರಿಕೋಟಾದಿಂದ ರಾಕೆಟ್ ಉಡಾಯಿಸಲಾಗಿತ್ತು. ಇದು ಅಗಸ್ಟ್ 20, 2019 ರಂದು ಚಂದ್ರನ ಕಕ್ಷೆಯನ್ನು ತಲುಪಿತ್ತು.
ಚಂದ್ರ ಮತ್ತು ಭೂಮಿಗೆ ಬರೋಬ್ಬರಿ 384400 ಕಿಲೋ ಮೀಟರ್ ದೂರ ಇರೋದ್ರಿಂದ ಇಷ್ಟೊಂದು ಸಮಯ ತೆಗೆದುಕೊಂಡಿತ್ತು. ಅದರಂತೆ ಈ ಬಾರಿಯೂ ಕೂಡ ಚಂದ್ರನ ತಲುಪಲು ದೀರ್ಘ ಕಾಲ ತೆಗೆದುಕೊಳ್ಳಲಿದೆ.
ಈ ಬಾರಿಯ ಚಂದ್ರಯಾನ-3 ಜರ್ನಿಯು ಜುಲೈ 14 ರಿಂದ ಆರಂಭಗೊಳ್ಳಲಿದೆ. ಈ ಬಾರಿಯೂ ಕೂಡ ಚಂದ್ರಯಾನ-3 ಮಷಿನ್ ಚಂದ್ರನ ತಲುಪಲು 45 ರಿಂದ 48 ದಿನಗಳ ಕಾಲ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇಸ್ರೋದ ವಿಜ್ಞಾನಿಗಳ ಪ್ರಕಾರ, ಆಗಸ್ಟ್ 23 ಅಥವಾ 24 ರಂದು ಲ್ಯಾಂಡ್ ಆಗುವ ಸಾಧ್ಯತೆ ಇದೆ.