ಕ್ರೀಡೆ

ಸ್ಮೃತಿ ಮಂದಾನ, ಕೌರ್ ಶತಕದ ವೈಭವ – ವಿಂಡೀಸ್ ವಿರುದ್ಧ ಭಾರತಕ್ಕೆ 155 ರನ್ ಗಳ ಜಯ

ಮಹಿಳಾ ವಿಶ್ವಕಪ್‍ನ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾದ ಸ್ಮೃತಿ ಮಂದಾನ ಮತ್ತು ಹರ್ಮನ್‍ಪ್ರೀತ್ ಕೌರ್ ಭರ್ಜರಿ ಶತಕದ ನೆರವಿನಿಂದ ಭಾರತ 155 ರನ್‍ಗಳ ಜಯ ಗಳಿಸಿದೆ.

ಟೀಂ ಇಂಡಿಯಾ ನೀಡಿದ 317 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ವಿಂಡೀಸ್ ಬ್ಯಾಟರ್‌ಗಳು 162 ರನ್‌ಗಳಿಗೆ ಸರ್ವಪನತ ಕಂಡು ಸೋಲೊಪ್ಪಿಕೊಂಡರು.

ಭಾರತ 155 ರನ್‌ಗಳ  ಜಯದೊಂದಿಗೆ ಕೂಟದ ಎರಡನೇ ಬೃಹತ್ ಮೊತ್ತದ ಜಯ ದಾಖಲಿಸಿದೆ.

ವೆಸ್ಟ್ ಇಂಡೀಸ್ ತಂಡದ ಆರಂಭಿಕ ಜೋಡಿ, ಡಿಯಾಂಡ್ರಾ ಡಾಟಿನ್ 62 ರನ್ (46 ಎಸೆತ, 10 ಬೌಂಡರಿ, 1 ಸಿಕ್ಸ್) ಮತ್ತು ಹೇಲಿ ಮ್ಯಾಥ್ಯೂಸ್ ಜೋಡಿ 43 ರನ್ (36 ಎಸೆತ, 6 ಬೌಂಡರಿ) ಬಾರಿಸಿ ಮೊದಲ ವಿಕೆಟ್‍ಗೆ 100 ರನ್‍ಗಳ ಜೊತೆಯಾಟವಾಡಿತು.

ಈ ಇಬ್ಬರು ಬ್ಯಾಟರ್‌ಗಳು ಔಟ್ ಆದ ಬಳಿಕ ಕುಸಿತ ಕಂಡ ವಿಂಡೀಸ್, ಭಾರತಕ್ಕೆ ಸವಾಲು ಅನಿಸಲೇ ಇಲ್ಲ. ಭಾರತದ ಬೌಲರ್‌ಗಳು ವಿಂಡೀಸ್ ಬ್ಯಾಟರ್‌ಗಳ ವಿಕೆಟ್ ಬೇಟೆಯನ್ನು ಸರಾಗವಾಗಿ ಮುಂದುವರಿಸಿ 162 ರನ್‌ಗಳಿಗೆ ಕಟ್ಟಿಹಾಕಿ ಗೆಲ್ಲುವಂತೆ ಮಾಡಿದರು.

ಭಾರತದ ಪರ ಸ್ನೇಹ ರಾಣಾ 3 ವಿಕೆಟ್‌ ಪಡೆದರು ಮೇಘನಾ ಸಿಂಗ್  2 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಕರ್, ಜೂಲನ್ ಗೋಸ್ವಾಮಿ ತಲಾ 1 ವಿಕೆಟ್ ಪಡೆಯಲು ಯಶಸ್ವಿಯಾದರು.

Team Newsnap
Leave a Comment
Share
Published by
Team Newsnap

Recent Posts

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಕೇಸ್ ದಾಖಲು

ಬೆಂಗಳೂರು : . ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದ್ದು , ಸಂತ್ರಸ್ತೆಯೊಬ್ಬರು ಜಡ್ಜ್ ಮುಂದೆ ಸಿಆರ್ ಪಿಸಿ… Read More

May 3, 2024

ಪೊಲೀಸ್ ಠಾಣೆ ಸಮೀಪದಲ್ಲೇ ಪತ್ನಿಯನ್ನು ಕೊಂದ ಪತಿ

ಬೆಂಗಳೂರು : ಕೋರಮಂಗಲದ ಆರನೇ ಬ್ಲಾಕ್ ನಲ್ಲಿ , ಕಿರುಕುಳದ ದೂರು ನೀಡಿದ ಪತ್ನಿಯನ್ನು ಪೊಲೀಸ್ ಠಾಣೆ ಎದುರಲ್ಲೇ ಪತಿ… Read More

May 3, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 3 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 66,250 ರೂಪಾಯಿ ದಾಖಲಾಗಿದೆ. 24… Read More

May 3, 2024

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024