ಭಾರತೀಯ ಜನಸಾಮಾನ್ಯರ ಆಂತರ್ಯದಲ್ಲಿ ಅತಿಹೆಚ್ಚು ಅಡಕವಾಗಿರುವ ಮತ್ತು ಪರೋಕ್ಷವಾಗಿ ಪ್ರಕಟವಾಗುವ ಭಾವ ಯಾವುದು ?……….
ಪ್ರೀತಿ…….. ಉತ್ತಮ,
ದ್ವೇಷ…….. ಮಧ್ಯಮ,
ಕೋಪ…….. ಸ್ವಲ್ಪ ಹೆಚ್ಚು,
ಕಾಮ……ಸಮಾಧಾನಕರ,
ಕರುಣೆ…… ಪರವಾಗಿಲ್ಲ,
ತ್ಯಾಗ…….ಸುಮಾರಾಗಿದೆ,
ಧೈರ್ಯ……. ಕಡಿಮೆ,
ಅಹಂಕಾರ…. ಒಂದಷ್ಟುಇದೆ,
ತಾಳ್ಮೆ…… ಸ್ವಲ್ಪ ಕಡಿಮೆ,
ಸಹಕಾರ…. ಓ ಕೆ,
ಭಕ್ತಿ……..ಹೆಚ್ಚು,
ನಂಬಿಕೆ…. ಅಪಾರ,
ಹಾಸ್ಯ….. ಉತ್ತಮ,
ಆದರೆ,
ಇದನ್ನೆಲ್ಲಾ ಮೀರಿದ ಅತಿಹೆಚ್ಚು ಭಾವ,
” ಅಸೂಯೆ “ಬಹುಶಃ ನಮ್ಮ ರಕ್ತದಲ್ಲಿಯೇ ಅಡಕವಾಗಿರಬೇಕು ಎನಿಸುತ್ತದೆ.
ಮೇಲ್ನೋಟಕ್ಕೆ ಮತ್ತು ನೇರವಾಗಿ ಅದು ಗೋಚರಿಸದಿದ್ದರು ಪರೋಕ್ಷವಾಗಿ ಅದು ತುಂಬಿ ತುಳುಕುತ್ತಿರುತ್ತದೆ.
ಕೆಲವರಿಗೆ ಮುಖದ ಮೇಲೆಯೇ ಕಾಣಿಸಿದರೆ, ಮತ್ತೆ ಕೆಲವರ ನಗುವಿನಲ್ಲಿ ಕಾಣುತ್ತದೆ. ಮತ್ತೆ ಕೆಲವರಲ್ಲಿ ಅವರ ದೇಹ ಭಾಷೆಯಿಂದ, ಅವರ ನಡವಳಿಕೆಯಿಂದ, ಅಪರೂಪವಾಗಿ ಅವರ ಮಾತು ಮತ್ತು ಮೌನದಿಂದ, ಆಗಾಗ ಅವರ ಕಣ್ಣೋಟದಿಂದ, ಇದು ವ್ಯಕ್ತವಾಗುತ್ತದೆ.
ಅಸೂಯೆ ಅಥವಾ ಮಾತ್ಸರ್ಯ ನಮ್ಮ ಸುತ್ತಮುತ್ತಲಿನ ಮತ್ತು ಮುಖ್ಯವಾಗಿ ಹತ್ತಿರದ ವಿವಿಧ ಸಂಬಂಧಗಳ ನಡುವೆಯೇ ಹೆಚ್ಚು ಉಂಟಾಗುತ್ತದೆ. ಹೇಳಲೂ ಆಗದ ಅನುಭವಿಸಲೂ ಆಗದ ಈ ಮಾನಸಿಕತೆಯನ್ನು ಆಡು ಭಾಷೆಯಲ್ಲಿ ಹೊಟ್ಟೆ ಉರಿ ಎಂದು ಕರೆಯಲಾಗುತ್ತದೆ.
ಅಸೂಯೆಯಿಂದಾಗಿಯೇ ಭಾರತೀಯರ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಾಧ್ಯವಾಗುತ್ತಿಲ್ಲ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗದೆ ಅನೇಕ ಪ್ರತಿಭೆಗಳು ನಾಶವಾಗುತ್ತಿವೆ.
ನನ್ನನ್ನೂ ಸೇರಿ ಈ ಅಸೂಯೆ ಎಂಬ ಸ್ಥಿತಿಯನ್ನು ಮೀರುವ ಆತ್ಮಸಾಕ್ಷಿಯ ಪ್ರಯತ್ನದ ಅವಶ್ಯಕತೆ ಇದೆ. ನಮ್ಮ ವೈಯಕ್ತಿಕ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಅಸೂಯೆ ಎಂಬ ಭಾವ ಕಡಿಮೆಯಾದಲ್ಲಿ ನಿಜಕ್ಕೂ ನಮ್ಮ ಪ್ರಬುದ್ದತೆಯ ಮಟ್ಟ ಸಹಜವಾಗಿಯೇ ಹೆಚ್ಚುತ್ತದೆ.
ಈ ಕ್ಷಣದಿಂದಲೇ ಆ ಪ್ರಯತ್ನ ಪ್ರಾರಂಭವಾಗಲಿ .
- ವಿವೇಕಾನಂದ. ಹೆಚ್.ಕೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ