December 23, 2024

Newsnap Kannada

The World at your finger tips!

vibhav taneja

ಭಾರತೀಯ ವೈಭವ್ ತನೇಜಾ ಟೆಸ್ಲಾ CFO – ಬೆಂಗಳೂರಿನ ನಂಟು

Spread the love

ನ್ಯೂಯಾರ್ಕ್‌: ಭಾರತೀಯ ವೈಭವ್ ತನೇಜಾ ಅವರನ್ನು ಟೆಸ್ಲಾ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಎಲಾನ್‌ ಮಸ್ಕ್‌ ಒಡೆತನದ ಎಲೆಕ್ಟ್ರಿಕ್‌ ಕಾರು ಕಂಪನಿ ನೇಮಕ ಮಾಡಿದೆ.

ಕಳೆದ ನಾಲ್ಕು ವರ್ಷಗಳಿಂದ ಟೆಸ್ಲಾದ ಮಾಸ್ಟರ್ ಆಫ್ ಕಾಯಿನ್ ಮತ್ತು ಹಣಕಾಸು ಮುಖ್ಯಸ್ಥ ಕಿರ್‌ಹಾರ್ನ್ನಂತರ ವೈಭವ್ ತನೇಜಾ (45)ಅವರನ್ನು ನೇಮಿಸಲಾಗಿದೆ.

ಚಾರ್ಟರ್ಡ್ ಅಕೌಂಟೆಂಟ್ ತನೇಜಾ ಅವರು ಮಾರ್ಚ್ 2019 ರಿಂದ ಟೆಸ್ಲಾದಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಫೆಬ್ರವರಿ 2017 ಮತ್ತು ಮೇ 2018 ರ ನಡುವೆ ಸಹಾಯಕ ಕಾರ್ಪೊರೇಟ್ ನಿಯಂತ್ರಕರಾಗಿ ಸೇವೆ ಸಲ್ಲಿಸಿದರು.

ಟೆಸ್ಲಾ ಸೇರಿದ್ದು ಹೇಗೆ?

ಅಮೆರಿಕದ ಸೌರ ಫಲಕ ಅಭಿವೃದ್ಧಿ ಪಡಿಸುವ ಸೋಲಾರ್‌ ಸಿಟಿ ಕಂಪನಿಯ ಹಣಕಾಸು ವಿಭಾಗದಲ್ಲಿ ವೈಭವ್ ತನೇಜಾ ಕೆಲಸ ಮಾಡುತ್ತಿದ್ದರು.

ಟೆಸ್ಲಾ 2016 ರಲ್ಲಿ ಈ ಸೋಲಾರ್‌ ಸಿಟಿ ಕಂಪನಿಯನ್ನು ಖರೀದಿಸಿತ್ತು. ಇದಕ್ಕೂ ಮೊದಲು ತನೇಜಾ ಅವರು ಜುಲೈ 1999 ಮತ್ತು ಮಾರ್ಚ್ 2016 ರ ನಡುವೆ ಪ್ರೈಸ್‌ವಾಟರ್‌ ಹೌಸ್‌ಕೂಪರ್ಸ್‌ನಲ್ಲಿ ಉದ್ಯೋಗಿಯಾಗಿದ್ದರು.

ಬೆಂಗಳೂರಿನ ನಂಟು :

ಭಾರತದಲ್ಲಿ ಕಂಪನಿ ಸ್ಥಾಪನೆ ಸಂಬಂಧ ಟೆಸ್ಲಾ ಕೇಂದ್ರ ಸರ್ಕಾರದ ಜೊತೆ ಕೆಲ ವರ್ಷಗಳಿಂದ ಮಾತುಕತೆ ನಡೆಸುತ್ತಿದೆ. ಇದಕ್ಕೆ ಪೂರಕ ಎಂಬಂತೆ 2021 ಜನವರಿಯಲ್ಲಿ ಟೆಸ್ಲಾ ಭಾರತದಲ್ಲಿ ಕಚೇರಿ ತೆರೆಯುವ ಸಂಬಂಧ ನೋಂದಣಿ ಮಾಡಿತ್ತು. ಟೆಸ್ಲಾ ಇಂಡಿಯಾ ಮೋಟಾರ್ಸ್‌ ಆಂಡ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ ಹೆಸರಿನಲ್ಲಿ ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿ ಕಂಪನಿಯನ್ನು ನೋಂದಣಿ ಮಾಡುವ ಜೊತೆಗೆ ಮೂರು ನಿರ್ದೇಶಕರನ್ನೂ ನೇಮಿಸಿತ್ತು. ಮೂರು ನಿರ್ದೇಶಕರ ಪೈಕಿ ವೈಭವ್ ತನೇಜಾ ಅವರ ಹೆಸರು ಇತ್ತು.ಹೃದಯಾಘಾತ -ಮುನ್ನೆಚ್ಚರಿಕಾ ಕ್ರಮ ಕಡ್ಡಾಯ : ಡಾ.ಸಿ.ಎನ್‌.ಮಂಜುನಾಥ್‌

ವೈಭವ್ ತನೇಜಾ ಜೊತೆ ವೆಂಕಟರಂಗಮ್‌ ಶ್ರೀರಾಮ್‌ ಮತ್ತು ಜಾನ್‌ ಫೆನ್‌ಸ್ಟಿನ್‌ ಅವರನ್ನು ಟೆಸ್ಲಾ ನಿರ್ದೇಶಕರನ್ನಾಗಿ ನೇಮಿಸಿತ್ತು.

Copyright © All rights reserved Newsnap | Newsever by AF themes.
error: Content is protected !!