December 9, 2024

Newsnap Kannada

The World at your finger tips!

heart attack , kid , death

ಹೃದಯಾಘಾತ -ಮುನ್ನೆಚ್ಚರಿಕಾ ಕ್ರಮ ಕಡ್ಡಾಯ : ಡಾ.ಸಿ.ಎನ್‌.ಮಂಜುನಾಥ್‌

Spread the love

ಭಾರತದಲ್ಲಿ ಕಳೆದ 15 ವರ್ಷದಿಂದ ಯುವಕರು ಮತ್ತು ಮಧ್ಯ ವಯಸ್ಕರಲ್ಲಿ ಹೃದಯಾಘಾತಗಳು ಶೇ.22ರಷ್ಟು ಹೆಚ್ಚಾಗಿವೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌ ತಿಳಿಸಿದರು.

ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನಾ ಅವರ ಹಠಾತ್‌ ನಿಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, 3-4 ದಶಕಗಳ ಹಿಂದೆ ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆ ಎಂಬುದೇ ಅಪರೂಪ ಎಂಬಂತಾಗಿದ್ದು, ಈಗಲೂ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಹೃದಯ ಸಮಸ್ಯೆಗಳು ಕಡಿಮೆ ಎಂದು ವಿವರಿಸಿದರು.

ಶ್ರಮದಾಯಕ ವ್ಯಾಯಾಮ ಮಾಡುವುದು ಹಾಗೂ ಎನರ್ಜಿ ಡ್ರಿಂಕ್ಸ್ ಬಳಕೆ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಈ ಬಗೆಯ ಶ್ರಮದಾಯಕ ವ್ಯಾಯಾಮ ಮಾಡುವವರು ಹೃದಯದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವರಿಗೆ ಆರೋಗ್ಯದ ಸಮಸ್ಯೆ ಇಲ್ಲದೆಯೂ ಹೃದಯಾಘಾತಗಳು ಆಗುತ್ತಿವೆ. ಅಲ್ಲದೇ ಅಂತವರಿಗೆ ಯಾವುದೇ ದುಶ್ಚಟಗಳು ಇಲ್ಲದೇ ಹೃದಯಾಘಾತಗಳಾಗಿವೆ. ಹೀಗಾಗಿ 35 ವರ್ಷ ಹೆಚ್ಚಾದ ಮೇಲೆ ವಾರ್ಷಿಕವಾಗಿ ಒಮ್ಮೆ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಯುವ ಜನರಿಗೆ ತೂಕ ಕಡಿಮೆ ಮಾಡುವ ಉತ್ಸಾಹ ಬೇಡ. ಅತೀ ವ್ಯಾಯಾಮದಿಂದ ರಕ್ತನಾಳಗಳಿಗೆ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೃದಯಾಘಾತದ ಸುಳಿವು ಸಿಗುತ್ತದೆ. ಇನ್ನೂ ಕೆಲವರಿಗೆ ಸುಳಿವು ಸಿಗುವುದಿಲ್ಲ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್ ಮಂಜುನಾಥ್ ಹೇಳಿದ್ದಾರೆ.

25-40 ವರ್ಷದ ಮಹಿಳೆಯರಲ್ಲೇ ಹೃದಯಾಘಾತಗಳು ಶೇ.8ರಷ್ಟು ಹೆಚ್ಚಾಗಿದ್ದು, ಹೀಗಾಗಿ ಜೀವನಶೈಲಿ, ಆಹಾರ ಕ್ರಮ, ಆರೋಗ್ಯದ ಬಗ್ಗೆ ನಿಗಾ ಸೇರಿದಂತೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ,ಕಳೆದ 6 ವರ್ಷಗಳಲ್ಲಿ 5500ಕ್ಕೂ ಹೆಚ್ಚು ಯುವಕರಿಗೆ ಜಯದೇವ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಚಿಕಿತ್ಸೆ ಕೊಟ್ಟಿದ್ದೇವೆ ಎಂದು ತಿಳಿಸಿದರು. ಮಾದಪ್ಪನ ಸನ್ನಿದಿಯಲ್ಲಿ ಗಾಂಜಾ ಮಾರಾಟ ಮೂವರ ಬಂಧನ

ಇತ್ತೀಚೆಗೆ ಮಹಿಳೆಯರಲ್ಲೂ ಅಕಾಲಿಕ ಹೃದಯಾಘಾತ ಸಮಸ್ಯೆ ಶೇ.8ರಷ್ಟು ಹೆಚ್ಚಾಗಿದ್ದು, ಇದಕ್ಕೆ ಮಹಿಳೆಯರ ಜೀವನದಲ್ಲೂ ಗಂಡಸರ ರೀತಿಯಲ್ಲೇ ಒತ್ತಡ ಹೆಚ್ಚಾಗುತ್ತಿರುವುದು ಪ್ರಮುಖ ಕಾರಣ. ಜತೆಗೆ, ಹಾರ್ಮೊನ್ಸ್‌, ಫ್ಯಾಟಿ ಲಿವರ್‌, ಥೈರಾಯ್ಡ್‌, ಪಿಒಸಿಡಿ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಮಾಹಿತಿ ನೀಡಿದರು.ಲೋ ಬಿಪಿ ಇರುವಂತವರು ಹೆಚ್ಚು ನೀರನ್ನು ಕುಡಿಯಬೇಕು. ಹೆಚ್ಚು ಹಣ್ಣುಗಳನ್ನು ಸೇವಿಸಬೇಕು ಎಂದಿದ್ದಾರೆ. 

Copyright © All rights reserved Newsnap | Newsever by AF themes.
error: Content is protected !!