ಗುಜರಾತಿನ ಕಡಲಿಗೆ ಮೀನುಗಾರಿಕೆ ಮಾಡಲು ಮುಂದಾದ ಮೀನುಗಾರರ ಮೇಲೆ ಪಾಕಿಸ್ತಾನದ ಜಲಸೈನಿಕರು ದೌರ್ಜನ್ಯ ಮೆರೆದಿದ್ದಾರೆ.
ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಭಾರತೀಯ ಮೀನುಗಾರಿಕಾ ಹಡಗಿನ ಮೇಲೆ ಪಾಕಿಸ್ತಾನಿ ನೇವಿ ಸೈನಿಕರು, ಗುಂಡಿನ ದಾಳಿ ನಡೆಸಿದ್ದು ಒಬ್ಬನನ್ನು ಹತ್ಯೆ ಮಾಡಿದ್ದಾರೆ. ಅಲ್ಲದೇ, 6 ಜನ ಮೀನುಗಾರರನ್ನು ಕಿಡ್ನಾಪ್ ಮಾಡಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಹತ್ಯೆಗೀಡಾದ ಮೀನುಗಾರನನ್ನು ಶ್ರಿಧರ್ ಎಂದು ಗುರ್ತಿಸಲಾಗಿದೆ.
ಗುಜರಾತಿನ ದ್ವಾರಕಾದ ಒಖಾ ಎಂಬಲ್ಲಿ ಭಾರತದ ಜಲ್ಪರಿ ಹೆಸರಿನ ಮೀನುಗಾರಿಕಾ ಹಡಗಿನ ಮೇಲೆ ಫೈರಿಂಗ್ ಮಾಡಿ ಭಾರತಕ್ಕೆ ಎಚ್ಚರಿಕೆಯನ್ನು ಪಾಕಿಸ್ತಾನ ರವಾನಿಸಿದೆ.
ಈ ಘಟನೆ ಬಗ್ಗೆ ಅಧಿಕೃತವಾಗಿ ಹೆಚ್ಚಿನ ಮಾಹಿತಿಯನ್ನ ಕೇಂದ್ರ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ನೀಡಿಲ್ಲ
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ