ಸಂಪ್ರದಾಯಕ ವೈರಿ ಪಾಕಿಸ್ತಾನದ ವಿರುದ್ದ ಭಾರತಕ್ಕೆ ಜಯ

Team Newsnap
1 Min Read

ದುಬೈ ಇಂಟರ್​ನ್ಯಾಷನಲ್​ ಕ್ರಿಕೆಟ್​​​ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್​​ 2ನೇ ಟಿ20 ಪಂದ್ಯದಲ್ಲಿ ಸಂಪ್ರದಾಯಕ ವೈರಿ ಪಾಕಿಸ್ತಾನದ ವಿರುದ್ದ ಭಾರತ 5 ವಿಕೆಟ್ ಗಳಿಂದ ಜಯಗಳಿಸಿದೆ.

ಟಾಸ್​ ಗೆದ್ದ ಟೀಂ ಇಂಡಿಯಾ ಕ್ಯಾಪ್ಟನ್​ ರೋಹಿತ್​ ಶರ್ಮಾ ಬೌಲಿಂಗ್​ ಆಯ್ದುಕೊಂಡರು. ಟಾಸ್​ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಪಾಕಿಸ್ತಾನ ಟೀಂ ಇಂಡಿಯಾಗೆ 148 ರನ್​​ಗಳ ಸಾಧಾರಣ ಮೊತ್ತದ ಟಾರ್ಗೆಟ್​​ ನೀಡಿತ್ತು

ಟೀಂ ಇಂಡಿಯಾ ಬೌಲರ್ಸ್​ ದಾಳಿಗೆ ತತ್ತರಿಸಿದ ಪಾಕ್​​, 19.5 ಓವರ್​​ನಲ್ಲಿ 147 ರನ್​ಗೆ ಆಲೌಟ್​ ಆಗಿದೆ. ಪಾಕ್​ ಪರ ಓಪನರ್​ ಆಗಿ ಬಂದ ಬಾಬರ್​ ಅಜಂ 10 ರನ್​ಗೆ ಔಟ್​ ಆದ್ರು. ಬಳಿಕ ರಿಜ್ವಾನ್​​ ಕೊನೆವರೆಗೂ ನಿಂತು 43 ರನ್​ ಗಳಿಸಿದರು. ಬ್ಯಾಂಕೂ ಮುಗ್ಧ ಗ್ರಾಹಕರೂ (ಬ್ಯಾಂಕರ್ಸ್ ಡೈರಿ)

ind vs pak 1

ಇಫ್ತಿಕರ್​ ಅಹ್ಮದ್​ 28, ಎಸ್​ ಧನಿ 16 ರನ್​ ಗಳಿಸಿದ್ರು. ಟೀಂ ಇಂಡಿಯಾ ಪರ ಹಾರ್ದಿಕ್​​ ಪಾಂಡ್ಯ 3, ಭುವನೇಶ್ವರ್​​ 4 , ಅರ್ಷದೀಪ್​ ಸಿಂಗ್​ 2 ವಿಕೆಟ್​ ತೆಗೆದರು

ಎರಡನೇ ಇನ್ಸಿಂಗ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ 10 ಓವರ್ ಗಳಿಗೆ 3 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು.

ind vs pak 2

ಕೆ ಎಲ್ ರಾಹುಲ್ ಯಾವುದೇ ರನ್ ಗಳಿಸದೇ ಮೊದಲ ಬಾಲ್ ಗೆ ಔಟ್ ಆದರು.
ನಂತರ ಬಂದ ವಿರಾಟ್ ಕೊಹ್ಲಿ 35 ರನ್ ಗಳಿಸಿದರೆ ಅದಕ್ಕೂ ಮುನ್ನ ರೋಹಿತ್ ಶರ್ಮ ಕೇವಲ 12 ರನ್ ಗಳಿಸಿ ಔಟ್ ಆದರು.

ಜಡೇಜಾ ರಕ್ಷಣಾತ್ಮಕವಾಗಿ ಆಟ ಆಡಿ ಭಾರತದ ಗೆಲುವಿಗೆ ಕಾರಣರಾದರು. ಹಾರ್ದಿಕ್ ಪಾಂಡೆ ಹಾಗೂ ಜಡೇಜಾ 52 ರನ್ ಜೊತೆ ಆಡಿ ಗೆಲುವಿಗೆ ಕಾರಣರಾದರು.

Share This Article
Leave a comment