ಭಾರತ vs ಆಸ್ಟ್ರೇಲಿಯಾ, 2ನೇ ಟೆಸ್ಟ್ ಪಂದ್ಯ: ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

Team Newsnap
1 Min Read

ಮೆಲ್ಬರ್ನ್ ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 103.1 ಓವರ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.

ಭಾರತ ಗೆಲ್ಲಲು ಕೇವಲ 70 ರನ್ ಬೇಕಾಗಿತ್ತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 2 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ.

ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ 1-1ರಿಂದ ಸಮಬಲಗೊಂಡಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 40, ಮಾರ್ನಸ್ ಲ್ಯಬುಶೇನ್ 28, ಸ್ಟೀವ್ ಸ್ಮಿತ್ 8, ಟ್ರಾವಿಸ್ ಹೆಡ್ 17, ಕ್ಯಮರಾನ್ ಗ್ರೀನ್ 45, ಪ್ಯಾಟ್ ಮಮಿನ್ಸ್ 22, ಮಿಚೆಲ್ ಸ್ಟಾರ್ಕ್ 14, ಜೋಶ್ ಹ್ಯಾಝಲ್ವುಡ್ 10 ರನ್‌ನೊಂದಿಗೆ 103.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿತ್ತು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದ ಪರ ಮಯಾಂಕ್ ಅಗರ್ವಾಲ್ 5, ಶುಬ್ಮನ್ ಗಿಲ್ ಅಜೇಯ 35, ಚೇತೇಶ್ವರ್ ಪೂಜಾರ 3, ನಾಯಕ ಅಜಿಂಕ್ಯ ರಹಾನೆ ಅಜೇಯ 27 ರನ್ ಬಾರಿಸಿದರು. ಭಾರತ 15.5 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 70 ರನ್ ಬಾರಿಸಿ ಸುಲಭದ ಗೆಲುವು ದಾಖಲಿಸಿತು. ಭಾರತದ ಪರ ಜಸ್‌ಪ್ರೀತ್‌ ಬೂಮ್ರಾ 4+2, ರವೀಂದ್ರ ಜಡೇಜಾ 2+1, ಆರ್ ಅಶ್ವಿನ್ 3+2, ಮೊಹಮ್ಮದ್ ಸಿರಾಜ್ 3+2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3+1, ಪ್ಯಾಟ್ ಕಮಿನ್ಸ್ 2+1, ಜೋಶ್ ಹ್ಯಾಝಲ್ವುಡ್ 1, ನೇಥನ್ ಲಿಯಾನ್ 3 ವಿಕೆಟ್‌ನೊಂದಿಗೆ ಗಮನ ಸೆಳೆದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ- ಅಜಿಂಕ್ಯ ರಹಾನೆ

Share This Article
Leave a comment