November 6, 2024

Newsnap Kannada

The World at your finger tips!

discipline , mandya , politics

Mandya MLA Ravi's discipline lesson from Chunchanagiri shri 'ಶರ್ಟ್ ಬಟನ್ ಹಾಕಿ' ಮಂಡ್ಯ ಶಾಸಕ ರವಿಗೆ ಚುಂಚನಗಿರಿ ಶ್ರೀಗಳ ಶಿಸ್ತಿನ ಪಾಠ

ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ 12 ಅಥವಾ ಶೇ 15 ಕ್ಕೆ ಏರಿಸಿ – ಜನವರಿ 23 ಡೆಡ್‌ಲೈನ್

Spread the love

ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಶೇ 12 ಅಥವಾ ಶೇ 15 ಕ್ಕೆ ಏರಿಸಲು ಸರ್ಕಾರಕ್ಕೆ ಜನವರಿ 23 ಕ್ಕೆ ಡೆಡ್‌ಲೈನ್ ನೀಡಲಾಗಿದೆ.

ಮೀಸಲಾತಿ ಹೋರಾಟದ ಅಖಾಡಕ್ಕೆ ಒಕ್ಕಲಿಗ ಸಮುದಾಯವ ಧುಮುಕಿದ ಬೆನ್ನಲ್ಲೇ ರಾಜ್ಯ ಒಕ್ಕಲಿಗರ ಸಂಘದಿಂದ ಭಾನುವಾರ ಮೀಸಲಾತಿ ಹೋರಾಟದ ಪೂರ್ವ ಭಾವಿ ಸಭೆ ನಡೆಸಿ 2023ರ ಜನವರಿ 23 ರೊಳಗೆ ಹಾಲಿ ಶೇ 4 ನಿಂದ ಶೇ 12 ಅಥವಾ ಶೇ15 ವರೆಗೆ ಮೀಸಲಾತಿ ಹೆಚ್ಚಿಸಲು ಗಡುವು ನೀಡಲಾಗಿದೆ.ವಿದ್ಯಾರ್ಥಿಗಳು 5 ನಿಮಿಷ ಲೇಟಾಗಿ ಬಂದಿದ್ದಕ್ಕೆ ಕೋಲಿನಿಂದ ಮನಬಂದಂತೆ ಬಾರಿಸಿದ ಶಿಕ್ಷಕ

ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೀಸಲಾತಿ ಇಕ್ಕಳದ ಹಿಡಿತ ಕ್ರಮೇಣ ಹೆಚ್ಚಾಗುತ್ತದೆ . ಎಸ್‍ಸಿ (SC), ಎಸ್‍ಟಿ (ST) ಮೀಸಲಾತಿ ಹೆಚ್ಚಳ ಬಳಿಕ ಹಲವು ಸಮುದಾಯಗಳು ಮೀಸಲಾತಿ ಹೋರಾಟದ ಅಖಾಡಕ್ಕಿಳಿದಿವೆ. ಮೊನ್ನೆ ಪಂಚಮಸಾಲಿ ಸಮುದಾಯದಿಂದ ಡಿಸೆಂಬರ್ 19 ರೊಳಗೆ 2ಎ ಪ್ರವರ್ಗಕ್ಕೆ ಸೇರಿಸಲು ಸರ್ಕಾರಕ್ಕೆ ಗಡುವು ನೀಡಿದೆ.

ಈ ಬೆನ್ನಲ್ಲೇ ಒಕ್ಕಲಿಗರ ಸಮುದಾಯವೂ ಹಾಲಿ ಶೇ 4ರಿಂದ ಶೇ 12ಅಥವಾ 15ಮೀಸಲಾತಿ ಹೆಚ್ಚಳಕ್ಕೆ ಹಕ್ಕೊತ್ತಾಯ ಮಾಡಿದೆ.

ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಇಂದು ರಾಜ್ಯ ಒಕ್ಕಲಿಗ ಸಂಘದ ವತಿಯಿಂದ ಮೀಸಲಾತಿಗೆ ಒತ್ತಾಯಿಸಿ ಪಕ್ಷಾತೀತ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಭಾಗವಹಿಸಿದ್ದ ನಿರ್ಮಲಾನಂದನಾಥ ಶ್ರೀಗಳು ಹಾಗೂ ನಂಜಾವಧೂತ ಶ್ರೀಗಳು ಸಮುದಾಯಕ್ಕೆ 15% ವರೆಗೆ ಮೀಸಲಾತಿ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯಿಸಿದರು. ಅಷ್ಟಲ್ಲದೇ ಮುಂದಿನ ವರ್ಷದ ಜನವರಿ 23 ರೊಳಗೆ ಬೇಡಿಕೆ ಈಡೇರಿಸದಿದ್ದರೆ ಹೋರಾಟದ ಎಚ್ಚರಿಕೆಯ ಸಂದೇಶವನ್ನು ಸ್ವಾಮೀಜಿಗಳು ರವಾನಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಆರ್.ಅಶೋಕ್‍ಗೆ ಸಮುದಾಯದ ಪರವಾಗಿ ಶ್ರೀಗಳು ಬೇಡಿಕೆಯ ಮನವಿ ಪತ್ರ ಸಲ್ಲಿಸಿದರು. ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ಆರ್‌.ಅಶೋಕ್, ಮೀಸಲಾತಿ ಹೆಚ್ಚಳ ಸೇರಿದಂತೆ ಸಮುದಾಯದ ಎಲ್ಲಾ ಬೇಡಿಕೆಗಳ ಬಗ್ಗೆ ಸಿಎಂ ಜೊತೆ ಮಾತಾಡಿ ಆದಷ್ಟು ಬೇಗ ಒಂದು ನಿರ್ಧಾರಕ್ಕೆ ಬರೋದಾಗಿ ಭರವಸೆ ಕೊಟ್ಟರು .

ಸಚಿವ ಸುಧಾಕರ್ ಮಾತನಾಡಿ, ಸಮುದಾಯ ನೀಡಿದ ಗಡುವಿನಲ್ಲಿ ಹೃದಯ ಶ್ರೀಮಂತಿಕೆ ಇರಬೇಕು ಎಂದು ಪರೋಕ್ಷವಾಗಿ ಗಡುವು ವಿಸ್ತರಿಸುವಂತೆ ಕೇಳಿಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲಿಸುತ್ತೇನೆ. ಸಮುದಾಯ ಒಗ್ಗಟ್ಟಿಂದ ಹೋರಾಟ ತೀವ್ರಗೊಳಿಸಬೇಕು. ಇದೇ ವೇಳೆ ಡಿಕೆಶಿ, ತಾವು ಸಿಎಂ ಆಗಲು ಪರೋಕ್ಷವಾಗಿ ಸಮುದಾಯದ ಆಶೀರ್ವಾದ ಕೋರಿದ್ರು. ಅವಕಾಶ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಈ ಅವಕಾಶವನ್ನು ಕಳೆದುಕೊಳ್ಳಲು ಹೋಗಬೇಡಿ ಎಂಬ ತಮ್ಮ ಎಂದಿನ ಹೇಳಿಕೆಯನ್ನು ಡಿಕೆಶಿ ಪುನರುಚ್ಚರಿಸಿದರು.

ಒಕ್ಕಲಿಗ ಸಮುದಾಯ ಸದ್ಯ ಪ್ರವರ್ಗ 3ಎ ಯಲ್ಲಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ 4ಮೀಸಲಾತಿ ಪಡೆಯುತ್ತಿದೆ. ಆದ್ರೆ ಜನಸಂಖ್ಯೆ ಶೇ 19 ರಿಂದ 2೦ಇದೆ ಅದಕ್ಕನುಸಾರ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸುತ್ತಿದೆ.

Copyright © All rights reserved Newsnap | Newsever by AF themes.
error: Content is protected !!