ಮೈಸೂರಿನ ಅರಮನೆ ಪ್ರವೇಶ ಶುಲ್ಕದಲ್ಲಿ ಹೆಚ್ಚಳ

Team Newsnap
1 Min Read

ಮೈಸೂರಿನ ಅರಮನೆ ಪ್ರವೇಶ ಶುಲ್ಕದಲ್ಲಿ ಹೆಚ್ಚಳವಾಗಿದೆ. ಈಗಿನ 70 ರೂ.ಗಳಿಂದ 100 ರೂ.ಗೆ ಏರಿಕೆಯಾಗಿದೆ.


ಕೋವಿಡ್-19 ರ ಪರಿಣಾಮ ಎರಡು ವರ್ಷಗಳಿಂದ ಆದಾಯಕ್ಕೆ ಪೆಟ್ಟುಬಿದ್ದಿದೆ. ನಿರ್ವಹಣೆಯ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಅರಮನೆ ಪ್ರವೇಶ ಶುಲ್ಕವವನ್ನು ಏರಿಸಲಾಗಿದೆ.

ಕಳೆದ ನಾಲ್ಕು ವರ್ಷಗಳಿಂದ ಪ್ರವೇಶ ಶುಲ್ಕ ಪರಿಷ್ಕರಣೆಯಾಗಿರಲಿಲ್ಲ. ಈಗ ಎಲ್ಲ ದಿನಗಳಲ್ಲೂ ಒಂದೇ ರೀತಿಯ ಶುಲ್ಕ ಇರುತ್ತದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಮಣ್ಯ ಹೇಳಿದ್ದಾರೆ.


ನಿರ್ವಹಣೆಗೆ ಪ್ರತಿ ತಿಂಗಳೂ 30 ಲಕ್ಷರೂ., ವೆಚ್ಚವಾಗುತ್ತಿದೆ. ಅರಮನೆ ದೀಪಾಲಂಕಾರ ಸೇರಿ ವಿದ್ಯುತ್ ದರವೇ ತಿಂಗಳಿಗೆ 10 ಲಕ್ಷರೂ. ಬರುತ್ತದೆ. ಪ್ರವಾಸಿಗರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗಿಲ್ಲ ಎಂದರು.


ವಯಸ್ಕರಿಗೆ 100 ರೂ., ವಿದೇಶಿಯರಿಗೂ ಇದೇ ದರವಿದೆ. 10 ರಿಂದ 18 ವರ್ಷದ ಮಕ್ಕಳಿಗೆ 50 ರೂ., ವಿದ್ಯಾರ್ಥಿಗಳಿಗೆ 30 ರೂ. ಶುಲ್ಕವಿದೆ ಎಂದು ಅವರು ಹೇಳಿದರು.

Share This Article
Leave a comment