ಇಂದು ಮತ್ತೆ ಎಲ್ ಪಿ ಜಿ ದರ 25 ರು ಹೆಚ್ಚಳ – ಗ್ರಾಹಕರಿಗೆ ಶಾಕ್

Team Newsnap
1 Min Read

ಒಂದು ಕಡೆ ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ದಿನ ನಿತ್ಯ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಛಳವಾದರೆ ಈಗ ಸೋಮವಾರವೂ ಎಲ್‌ಪಿಜಿ ಗ್ಯಾಸ್‌ ಸಿಲೆಂಡರ್‌ ಬೆಲೆ ಕೂಡ ಹೆಚ್ಚಳ ಕಂಡಿದೆ.

ಎಲ್ ಪಿಜಿ ಸಿಲಿಂಡರ್ ಗಳ ಬೆಲೆ ಸೋಮವಾರ ಮತ್ತೆ 25 ರು ಏರಿಕೆ ಕಂಡಿದೆ.

ಮೂರು ದಿನಗಳ ಹಿಂದಷ್ಟೇ ಈ ಬೆಲೆ 25 ರು ರಷ್ಟು ಏರಿಕೆ ಯಾಗಿತ್ತು. ಇನ್ನೂ ಕಮರ್ಷಿಯಲ್ ಸಿಲಿಂಡರ್ ದರ 96 ರು. ಏರಿಕೆಯಾಗಿ 1666 ರು ತಲುಪಿದೆ

ಈ ಬೆಲೆ ಏರಿಕೆಯಿಂದ ದೆಹಲಿಯಲ್ಲಿ 14.2 ಕೆಜಿ ತೂಕದ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 819 ರೂ.ಗೆ ಏರಿಕೆಯಾಗಿದೆ.

ಮಾರ್ಚ್ 1ರಿಂದ ಹೊಸ ದರ ಜಾರಿಗೆ ಬಂದಿದೆ. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂಪಾಯಿಏರಿಕೆ ಕಂಡಿದೆ.

ಈ ಹಿಂದೆ ಫೆಬ್ರವರಿ 4 ಮತ್ತು 14ರಂದು ದರ ಏರಿಕೆ ಮಾಡಲಾಗಿತ್ತು. ಫೆಬ್ರವರಿ 25ರಂದು ಅಡುಗೆ ಅನಿಲದ ಬೆಲೆ 25 ರೂ.ಗೆ ಏರಿಕೆ ಯಾಗಿತ್ತು. ಇದು ಫೆಬ್ರವರಿ ತಿಂಗಳಲ್ಲಿ ಮೂರನೇ ಏರಿಕೆ ಯಾಗಿತ್ತು.

ಡಿಸೆಂಬರ್ ನಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಎರಡು ಬಾರಿ ಏರಿಕೆ ಮಾಡಲಾಗಿತ್ತು. ಡಿಸೆಂಬರ್ 1ರಂದು ಇದರ ದರವನ್ನು 594 ರೂ.ಗಳಿಂದ 644 ರೂ.ಗೆ ಏರಿಸಲಾಯಿತು ಮತ್ತು ಡಿಸೆಂಬರ್ 15ರಂದು ಮತ್ತೆ 694 ರೂ.ಗೆ ಏರಿಕೆ ಯಾಗಿತ್ತು. ಅಂದರೆ ಒಂದು ತಿಂಗಳಲ್ಲಿ 100 ರೂಪಾಯಿ ಹೆಚ್ಚಳ ಮಾಡಲಾಗಿದೆ. ಆದರೆ, ಜನವರಿಯಲ್ಲಿ ದರ ಏರಿಕೆ ಮಾಡಿಲ್ಲ. ಜನವರಿಯಲ್ಲಿ ಸಬ್ಸಿಡಿ ರಹಿತ ಎಲ್ ಪಿಜಿ (14.2 ಕೆ.ಜಿ) ಬೆಲೆ 694 ರೂ ಆಗಿತ್ತು.

Share This Article
Leave a comment