December 19, 2024

Newsnap Kannada

The World at your finger tips!

WhatsApp Image 2022 11 19 at 4.32.34 PM

In Pandavapura. 25th, 26th, 27th Punithotsava: MLA C.S. Puttaraju ಪಾಂಡವಪುರದಲ್ಲಿ ನ. 25, 26, 27 ರಂದು ಪುನೀತೋತ್ಸವ: ಶಾಸಕ ಸಿ.ಎಸ್.ಪುಟ್ಟರಾಜು

ಪಾಂಡವಪುರದಲ್ಲಿ ನ. 25, 26, 27 ರಂದು ಪುನೀತೋತ್ಸವ: ಶಾಸಕ ಸಿ.ಎಸ್.ಪುಟ್ಟರಾಜು

Spread the love

ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ನ 25,26 ಹಾಗೂ 27 ರಂದು ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‍ಕುಮಾರ್ ಪುನೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್. ಪುಟ್ಟರಾಜು ತಿಳಿಸಿದರು.

ಪಾಂಡವ ಕ್ರೀಡಾಂಗಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಪುಟ್ಟರಾಜು ಅವರು,ಕನ್ನಡ ಚಿತ್ರರಂಗ ಕಂಡ ಮೇರು ನಟ ಪುನೀತ್ ರಾಜ್‍ಕುಮಾರ್ ಅವರನ್ನು ಸ್ಮರಿಸುವ ಭಾಗವಾಗಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಮೇಲುಕೋಟೆಯಲ್ಲಿ ಕೆಳಕ್ಕೆ ಉರುಳಿದ ಭಾರಿ ಗಾತ್ರದ ಮರ – ಮೂವರು ವಿದ್ಯಾರ್ಥಿಗಳಿಗೆ ಗಾಯ


ಪುನೀತೋತ್ಸವ ಕಾರ್ಯಕ್ರಮದಲ್ಲಿ ಡಾ. ರಾಜ್ ಕುಟುಂಬದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವರು ಭಾಗಿ‌ಯಾಗಲಿದ್ದಾರೆ.

ಮೂರು ದಿನಗಳ ಕಾಲ ಅಪ್ಪು ನೆನಪಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.ಕನ್ನಡ ಚಿತ್ರರಂಗದ ಖ್ಯಾತ ನಟ, ನಟಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.

ಸ್ವತಂತ್ರ ಸರ್ಕಾರ ಅತಂತ್ರ ಪರಿಸ್ಥಿತಿ ಬರಲ್ಲ:

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವುದಿಲ್ಲ.
ನೂರಕ್ಕೆ ನೂರರಷ್ಟು ಕುಮಾರಸ್ವಾಮಿ ಸಿಎಂ ಆಗುವುದು ಖಚಿತ. ಜೆಡಿಎಸ್ ಸ್ವತಂತ್ರವಾಗಿ ಅಧಿಕಾರ ಹಿಡಿಯಲಿದೆ ಎಂದರು.

ಜೆಡಿಎಸ್ ಬಿಟ್ಟು ಹೋದವರೆಲ್ಲಾ ಮತ್ತೆ ಪಕ್ಷಕ್ಕೆ ವಾಪಾಸ್ ಬರುತ್ತಾರೆ.
ಕಳೆದ ಬಾರಿ ಕೆಆರ್ ಪೇಟೆಯಲ್ಲಿ ದುಡ್ಡಿನ ಪ್ರಭಾವಿದಿಂದ ಸೋಲಾಗಿತ್ತು.
ಆದರೆ ಈ ಬಾರಿ ಸಮರ್ಥ ಅಭ್ಯರ್ಥಿಗಳಿದ್ದಾರೆ, ಸಾಕಷ್ಟು ಅಂತರದಿಂದ ಗೆಲ್ತೇವೆ.ಜಿಲ್ಲೆಯಲ್ಲಿ ಈ ಬಾರಿಯೂ 7ಕ್ಕೆ 7 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಸದಸ್ಯರಾದ ಬಿ.ವೈ.ಬಾಬು,ಶಿವಣ್ಣ,ಇಮ್ರಾನ್, ಶಿವಕುಮಾರ್, ಚಂದ್ರು, ತಾಲ್ಲೂಕು ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!