ಗ್ಯಾಂಗ್ರಿನ್ ನಿಂದ ಬಳಲುತ್ತಿದ್ದ ಗಂಡನ ಕಾಲು ಕಟ್ ಮಾಡಿ ಹೆಂಡತಿ ಕೈಗೆ ನೀಡಿದ ಮಂಡ್ಯದ ಮಿಮ್ಸ್ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು ಮಾಡಿ ವಿವಾದಗಳ ಕೇಂದ್ರ ಬಿಂದು ಆಗಿದ್ದಾರೆ.
ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಶಸ್ತ್ರಚಿಕಿತ್ಸೆ ಬಳಿಕ ಕತ್ತರಿಸಿದ ಕಾಲನ್ನು ಪತ್ನಿಗೆ ಹಸ್ತಾಂತರ ಮಾಡಿದ ಘಟನೆ ಮಂಡ್ಯ ಮಿಮ್ಸ್ ನಲ್ಲಿ ನಡೆದಿದೆ.
ಗಂಡನ ಕಾಲು ಹಿಡಿದು ಅಳುತ್ತಾನಿಂತ ವೃದ್ಧೆ ಭಾಗ್ಯಮ್ಮ ಮಂಡ್ಯದ ಕೀಲಾರ ಗ್ರಾಮದವರು.
ಗ್ಯಾಂಗ್ರಿನ್ ಖಾಯಿಲೆ ತುತ್ತಾಗಿದ್ದ ಪತಿ ಪ್ರಕಾಶ್‌ಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು .
ಕಳೆದ ಮೂರು ನಾಲ್ಕು ದಿನಗಳ ಚಿಕಿತ್ಸೆ ಬಳಿಕ ಇಂದು ಶಸ್ತ್ರಚಿಕಿತ್ಸೆ ಮೂಲಕ ಕಾಲು ಕತ್ತರಿಸಿದ ಬಳಿಕ ಕಾಲನ್ನು ಪತ್ನಿ ಕೈಗೆ ನೀಡಿ ಸಿಬ್ಬಂದಿಗಳ ಎಡವಟ್ಟು ಮಾಡಿದ್ದಾರೆ.
ಮುರುಘಾ ಶಿವಮೂರ್ತಿ ವಿರುದ್ದ ಫೋಕ್ಸೊ ಪ್ರಕರಣದ 5 ನೇ ಆರೋಪಿ ವಕೀಲನ ಬಂಧನ
ಕತ್ತರಿಸಿದ ಕಾಲನ್ನು ಎಲ್ಲಾದರೂ ಮಣ್ಣು ಮಾಡುವಂತೆ ಸಿಬ್ಬಂದಿಗಳು ಭಾಗ್ಯಮ್ಮನ ಕೈಗೆ ಕೊಟ್ಟಿದ್ದಾರೆ
ದಿಕ್ಕು ತೋಚದೆ ತಬ್ಬಿಬ್ಬಾದ ಭಾಗ್ಯಮ್ಮ.ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತರು.
ಸಿಬ್ಬಂದಿಗಳೇ ಮಣ್ಣು ಮಾಡಲು ಸಾವಿರಾರು ರೂಪಾಯಿ ಹಣ ಕೇಳಿದ್ದಾರೆ. ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನ ಕತ್ತರಿಸಿದ ಕಾಲನ್ನು ಹೆಂಡತಿಯ ಕೈ ಕೊಟ್ಟು ಮಿಮ್ಸ್ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ.
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
More Stories
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ಚನ್ನಪಟ್ಟಣ ನಗರಸಭೆ ಆಯುಕ್ತ ನಾಗೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ
ಮಂಡ್ಯ: ಡಿಸಿ, ಎಸ್ಪಿ ಕಚೇರಿಗಳ ಸಮೀಪದಲ್ಲಿ ಗಾಂಜಾ ಗಿಡಗಳು ಪತ್ತೆ!