1991 ರಲ್ಲಿ ಬಂಗಾರಪ್ಪ ಸುಗ್ರೀವಾಜ್ಞೆ ತಂದು ದಿಟ್ಟತನ ತೋರಿದ್ದರು : ಅಧಿಕಾರವನ್ನೂ ಕಳೆದುಕೊಂಡರು…..

Team Newsnap
1 Min Read

ಬೆಂಗಳೂರು :

ಸುಪ್ರೀಂ ಆದೇಶದ ಅನ್ವಯ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಹನಿ ನೀರು ಬಿಡಬಾರದು‌ ಎಂಬ ಕೂಗು ಈಗ ರಾಜ್ಯದ ಎಲ್ಲೆಡೆ ಭುಗಿಲೆದ್ದಿದೆ.

1991 ರಲ್ಲಿ ಇಂತಹದ್ದೇ ಸನ್ನಿವೇಶ ಎದುರಾದಾಗ ಮಾಜಿ ಸಿಎಂ ಬಂಗಾರಪ್ಪನವರು ಖಡಕ್ ನಿರ್ಧಾರವನ್ನು ಕೈಕೊಂಡಿದ್ದರು. ಈಗ ಸಿಎಂ ಸಿದ್ದರಾಮಯ್ಯನವರು ಅದೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸುತ್ತಿದ್ದಾರೆ.

ಕಾವೇರಿ ನೀರು ಉಳಿಸಲು ಸುಗ್ರೀವಾಜ್ಞೆ ಜಾರಿಗೆ ತಂದು ಸೆಡ್ಡು ಹೊಡೆದ ಆ ದಿನಗಳನ್ನು ನೆನಪುಗಳನ್ನು ಮೆಲುಕು ಹಾಕಬಹುದು.

ಬಂಗಾರಪ್ಪ ಸೆಡ್ಡು ಹೊಡೆದದ್ದು ಹೇಗೆ? :

1991ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್‌.ಬಂಗಾರಪ್ಪನವರು ಕಾವೇರಿ ತೀರ್ಪಿಗೆ ಸೆಡ್ಡು ಹೊಡೆದಿದ್ದರು. ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಿ ಸುಗ್ರೀವಾಜ್ಞೆ ಜಾರಿಗೆ ತಂದು ನ್ಯಾಯಾಲಯದ ಆದೇಶಕ್ಕೆ ಸೆಡ್ಡು ಹೊಡೆದು ನಿಂತರು.

ಅದೇ ರೀತಿ ಕನ್ನಡಿಗರ ಸ್ವಾಭಿಮಾನ, ಕನ್ನಡದ ಅಸ್ಮಿತೆ ಕಾಪಾಡಲು ಈಗಿನ ಸಿಎಂ ಕೂ ಅದೇ ರೀತಿಯ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. 1991ರಲ್ಲಿ ಕಾವೇರಿ ನೀರು ಬಿಡದಂತೆ ಸುಗ್ರೀವಾಜ್ಞೆ ಹೊರಡಿಸಿದ್ದ ಬಂಗಾರಪ್ಪನವರು ಸಿಎಂ ಸ್ಥಾನವನ್ನೇ ಕಳೆದುಕೊಂಡಿದ್ದರು.

ತಮಿಳುನಾಡಿಗೆ 205 ಟಿಎಂಸಿ ಕಾವೇರಿ ನೀರು ಬಿಡುವಂತೆ 1991ರಲ್ಲಿ ಕಾವೇರಿ ಟ್ರಿಬ್ಯೂನಲ್ ಮಧ್ಯಂತರ ಆದೇಶ ನೀಡಿತ್ತು. ಈ ತೀರ್ಪಿಗೆ ವಿರುದ್ಧವಾಗಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿದ್ದರು.

ಡ್ಯಾಮ್‌ಗಳಲ್ಲಿರುವ ನೀರನ್ನು ನಮ್ಮ ರಾಜ್ಯದ ರೈತರಿಗೆ ಸಂಪೂರ್ಣವಾಗಿ ಸಂರಕ್ಷಿಸುವಂತೆ ಅಧಿಕಾರಿಗಳಿಗೆ ಕಟ್ಟಪ್ಪಣೆ ಹೊರಡಿಸಿದ್ದರು.

ಕನ್ನಡ ಸಂಘಟನೆಗಳು 1991 ರ ಡಿ. 13 ರಂದು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮುಖ್ಯಮಂತ್ರಿ ಬಂಗಾರಪ್ಪನವರು ಪರೋಕ್ಷವಾಗಿ ಸಂಪೂರ್ಣ ಬೆಂಬಲ ನೀಡಿದರು. ಅದು ಒಂದು ರೀತಿಯಲ್ಲಿ ಸರ್ಕಾರಿ ಪ್ರಾಯೋಜಿತ ಬಂದ್ ಆಗಿತ್ತು. ಕೋಪ ತಾಪದಿಂದ ಕುದಿಯುತ್ತಿದ್ದ ಕನ್ನಡ ಕಾರ್ಯಕರ್ತರು ಬೀದಿಗೆ ಇಳಿದರು.

Share This Article
Leave a comment