ಐಎಂಎ ಪ್ರಕರಣ: ಮೂರು ಪೋಲೀಸರ ಅಮಾನತು

Team Newsnap
1 Min Read

ಐಎಂಎ ಹಗರಣದ ಬಗ್ಗೆ ತನಿಖೆ ನಡೆಸಿ ಸಿಬಿಐ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ, ಸಿಐಡಿ ಡಿಎಸ್‌ಪಿಯಾಗಿದ್ದ ಇ.ಡಿ. ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್, ಪಿಸಿಐ ಗೌರಿ ಶಂಕರ್ ಅವರನ್ನು ಅಮಾನತು ಮಾಡಿದೆ.

ಐಎಂಎ ವಂಚನೆಯ‌ ಪ್ರಕರಣದಲ್ಲಿ‌ ಪೋಲೀಸರು ಸರಿಯಾದ ತನಿಖೆ ನಡೆಸಿಲ್ಲ‌ ಎಂದು ಸಿಬಿಐ ಆರೋಪಿಸಿತ್ತು.

ಸರ್ಕಾರದಿಂದ ಆದೇಶ ಪಡೆದ ನಂತರ ತನಿಖೆ ನಡೆಸಿದ ಸಿಬಿಐ 28 ಆರೋಪಿಗಳ ವಿರುದ್ಧ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಪೂರಕ ದೋಷಾರೋಪ ಪಟ್ಟಿಯಲ್ಲಿ‌ ಸಿಬಿಐ, ಐಜಿಪಿ ಹೇಮಂತ್ ನಿಂಬಾಳ್ಕರ್, ಕಮಾಂಡೆಂಟ್ ಅಜಯ್ ಕುಮಾರ್‌ ಹಿಲೋರಿ, ಸಿಐಡಿ ಡಿಎಸ್‌ಪಿಯಾಗಿದ್ದ ಇ.ಡಿ. ಶ್ರೀಧರ್, ಕಮರ್ಷಿಯಲ್ ಸ್ಟ್ರೀಟ್ ಪೋಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್, ಪಿಸಿಐ ಗೌರಿ ಶಂಕರ್ ಅವರ ಹೆಸರನ್ನೂ ಸೇರಿಸಿತ್ತು.

ಆದರೆ ಸರ್ಕಾರ ಐಪಿಎಸ್ ಅಧಿಕಾರಿಗಳನ್ನು ಬಿಟ್ಟು ಕೆಳಹಂತದ ಪೋಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ‌. ಸರ್ಕಾರದ ಈ ನಡೆಯ ಬೆನ್ನಲ್ಲೇ‌ ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆಯಾ ಎಂಬ ಅನುಮಾನಗಳು ಮೂಡದೇ ಇರದು.

Share This Article
Leave a comment