November 27, 2021

Newsnap Kannada

The World at your finger tips!

ನಾನು ಸಿಎಂ ಅಲ್ಲ: ಕಾಮನ್‌ ಮ್ಯಾನ್ ಅನ್ನುವ ಬೊಮ್ಮಾಯಿ ಝಿರೋ ಟ್ರಾಫಿಕ್ ಹೋಗಿದ್ದೇಕೆ ?

Spread the love

ನಾನು ಸಿಎಂ ಅಲ್ಲ. ಕಾಮನ್‌ ಮ್ಯಾನ್‌. ಸರಳ ರಾಜಕಾರಣಿ ಎಂದು ಬಸವರಾಜ ಬೊಮ್ಮಾಯಿ ಅವರೇ ಹಲವು ವೇದಿಕೆಯಲ್ಲಿ ಹೇಳಿದ್ದಾರೆ.

ಮಧ್ಯರಾತ್ರಿ ವೇಳೆಯಲ್ಲಿ ವಾಹನಗಳ ಸಂಚಾರ ಕಡಿಮೆ ಇದ್ದಾಗಲೂ ಝೀರೋ ಟ್ರಾಫಿಕ್‌ ನಲ್ಲಿ ತಡಸದಿಂದ ಹುಬ್ಬಳ್ಳಿವರೆಗೆ ಸಿಎಂ ಬೊಮ್ಮಾಯಿ ಪ್ರಯಾಣ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಮಧ್ಯರಾತ್ರಿ ಸಿಎಂಗೆ ಝೀರೋ ಟ್ರಾಫಿಕ್‌ ಅವಕಾಶ ಮಾಡಿಕೊಟ್ಟಿದ್ದರಿಂದ ಅರ್ಧಗಂಟೆ ಕಲ ಸರ್ವಿಸ್‌ ರಸ್ತೆಯಲ್ಲಿ ನೂರಾರು ವಾಹನಗಳು ನಿಂತ ವಾಹನಗಳು ನಿಂತಿದ್ದವು.

ಬುಧವಾರ ರಾತ್ರಿ ಸಿಎಂ ಹಾನಗಲ್‌ ವಿಧಾನಸಭಾ ಉಪಚುನಾವಣೆಯ ಪ್ರಚಾರಕ್ಕೆ ತೆರಳಿದ್ದರು. ಪ್ರಚಾರ ಮುಗಿಸಿ ರಾತ್ರಿ ಹುಬ್ಬಳ್ಳಿಗೆ ಝೀರೋ ಟ್ರಾಫಿಕ್‌ನಲ್ಲಿ ಮರಳಿದ್ದಾರೆ.

ಶಿಗ್ಗಾಂವಿಯ ತಡಸ ಕ್ರಾಸ್‍ನಿಂದ ಹುಬ್ಬಳ್ಳಿವರೆಗೂ ಬೊಮ್ಮಾಯಿ ಅವರಿಗೆ ಝೀರೋ ಟ್ರಾಫಿಕ್ ನೀಡಲಾಗಿತ್ತು. ಬೇರೆ ವಾಹನಗಳಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಪೊಲೀಸರು ಅವಕಾಶ ನೀಡಿರಲಿಲ್ಲ. ರಸ್ತೆಗೆ ಇಳಿಯಲು ಅವಕಾಶ ನೀಡದ ಕಾರಣ ಸರ್ವಿಸ್‌ ರಸ್ತೆಯಲ್ಲೇ ಇತರೇ ವಾಹನಗಳು ನಿಂತಿದ್ದವು. ಪೊಲೀಸರು ತಡೆದ ಪರಿಣಾಮ ಸುಮಾರು 20 ನಿಮಿಷದಿಂದ ಅರ್ಧಗಂಟೆಯವರೆಗೂ ವಾಹನಗಳು ಸರ್ವಿಸ್‌ ರಸ್ತೆಯಲ್ಲೇ ನಿಂತಿದ್ದವು.

error: Content is protected !!