December 19, 2024

Newsnap Kannada

The World at your finger tips!

teacher,college,suicide

Illness Issue: SJB IT College Professor Chaitra committed suicide ಅನಾರೋಗ್ಯ ಸಮಸ್ಯೆ: ಆತ್ಮಹತ್ಯೆ ಮಾಡಿಕೊಂಡ SJB IT ಕಾಲೇಜು ಪ್ರೊಫೆಸರ್ ಚೈತ್ರಾ #Thenewsnap #Latestnews #Suicide #banglore #india #karnataka #mandya_news #Mysuru

ಅನಾರೋಗ್ಯ ಸಮಸ್ಯೆ: ಆತ್ಮಹತ್ಯೆ ಮಾಡಿಕೊಂಡ SJB IT ಕಾಲೇಜು ಪ್ರೊಫೆಸರ್ ಚೈತ್ರಾ

Spread the love

ಬೆಂಗಳೂರಿನ ಎಸ್​ಜೆಬಿಐಟಿ ಕಾಲೇಜು ಪ್ರೊಫೆಸರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕದಂಬ ಲೇಔಟ್​ನಲ್ಲಿ ಜರುಗಿದೆ.

ಚೈತ್ರಾ (41) ಆತ್ಮಹತ್ಯೆಗೆ ಶರಣಾದ ಪ್ರೊಫೇಸರ್.ಇದನ್ನು ಓದಿ –ಆನೆ ಕೊಂದ ಆರೋಪಿಗಳಿಗೆ ಪ್ರಜ್ವಲ್​ ರೇವಣ್ಣ ರಕ್ಷಣೆ ಮನೇಕಾ ಗಾಂಧಿ ಗಂಭೀರ ಆರೋಪ- ಸಿಎಂಗೆ ಪತ್ರ

ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಚೈತ್ರಾ ಅವರ ಪತಿ ಗುರುಪ್ರಸಾದ್ ಶಿಗ್ಗಾವಿಯಲ್ಲಿ ಜಾನಪದ ವಿಶ್ವವಿದ್ಯಾನಿಲಯದಲ್ಲಿ ರಿಜಿಸ್ಟಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ

ನನ್ನ ಸಾವಿಗೆ ನಾನೇ ಕಾರಣ. ನನಗೆ ತೀವ್ರವಾದ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ನನ್ನನ್ನು ಕ್ಷಮಿಸಿ ಬಿಡಿ ಎಂಬ ನೋಟ್​ಮೃತದೇಹದ ಬಳಿ ಪತ್ತೆಯಾಗಿದೆ

ಬೆಳಗ್ಗೆ ಚೈತ್ರಾ ಪತಿಯು ಫೋನ್​ ಮಾಡಿದಾಗ ರೀಸಿವ್​ ಮಾಡಿರಲಿಲ್ಲ. ಹೀಗಾಗಿ ಅವರು ಚೈತ್ರಾ ಅವರ ಸಹೋದರನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ , ಅವರು ಬಂದು ಮನೆಯ ಬಾಗಿಲು ಮುರಿದು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಚೈತ್ರಾ ಅವರ ಮೃತದೇಹ ಪತ್ತೆಯಾಗಿದೆ.

ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲು ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!