December 27, 2024

Newsnap Kannada

The World at your finger tips!

CID , PSI , scam

PSI scam: Rudragowda Patil escapes from CID officials ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

ಶಿಕ್ಷಕರ ಅಕ್ರಮ ನೇಮಕಾತಿ: ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿ ಐವರನ್ನು ಬಂಧಿಸಿದ CID

Spread the love

2014-15 ರ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ , ಪಠ್ಯ ಪುಸ್ತಕ ಸಮಿತಿ ನಿರ್ದೇಶಕ ಮಾದೇಗೌಡ , ನಿವೃತ್ತ ಜಂಟಿ ನಿರ್ದೇಶಕ ಜಿ.ಆರ್ ಬಸವರಾಜು, ನಿವೃತ್ತ ಜಂಟಿ ನಿರ್ದೇಶಕಿ ಕೆ.ರತ್ನಯ್ಯ ಬಂಧಿಸಲಾಗಿದೆ . ಆರೋಪಿಗಳನ್ನು ಅ.1 ರವರೆಗೆ ಸಿಐಡಿ ವಶಕ್ಕೆ ನ್ಯಾಯಾಲಯ ನೀಡಿದೆ.ಇದನ್ನು ಓದಿ –ಮಂಡ್ಯದಲ್ಲಿ ರೈತರಿಂದ PAY FARMER ಅಭಿಯಾನ ಆರಂಭ

ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಒಡಿ ಪೊಲೀಸರು, ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ಒಬ್ಬೊಬ್ಬರನ್ನೇ ಬಲೆಗೆ ಬೀಳಿಸುತ್ತಿದ್ದಾರೆ.

ಬಂಧಿತ ಐವರು ಆರೋಪಿಗಳನ್ನು ಸಿಐಡಿ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸವ ಹಿನ್ನೆಲೆ ಸಿಐಡಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಈ ಸಂಬಂಧ ಬಂಧಿತ ಐವರು ಆರೋಪಿಗಳು ಅಕ್ಟೋಬರ್ 1 ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.

ಹಣ ನೀಡಿ ಶಿಕ್ಷಕರ ಹುದ್ದೆ ಗಿಟ್ಟಿಸಿದ್ದ ಆರೋಪಿಗಳಿಗೆ ಮತ್ತೊಂದು ಕಾನೂನಿನ ಉರುಳು ಸುತ್ತಿಕೊಂಡಿದೆ. ಆರೋಪಿತ ಶಿಕ್ಷಕರು ಹಾಗೂ ಕಿಂಗ್ ಪಿನ್ ಕೆ ಎನ್ ಪ್ರಸಾದ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಸ್ತ್ರವನ್ನು ಸಿಐಡಿ ಪ್ರಯೋಗಿಸಿದೆ.

ಪ್ರಕರಣದ ತನಿಖೆ ಎದುರಿಸುತ್ತಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಎಫ್ ಡಿ ಸಿ ಕೆ ಸಿ ಪ್ರಸಾದ್ ಸರ್ಕಾರಿ ನೌಕರನಾಗಿದ್ದಾನೆ. ಹಾಗೂ ಬಂಧಿತ 13 ಮಂದಿ ಆರೋಪಿಗಳು ಸರ್ಕಾರಿ ನೌಕರನಾಗಿದ್ದಾನೆ.

ಬಂಧಿತ ಆರೋಪಿಗಳು ಎಫ್ ಡಿ ಸಿ ಪ್ರಸಾದ್ ಗೆ ಹಣ ನೀಡಿ ಹುದ್ದೆ ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ , ಆದ್ದರಿಂದ ಭ್ರಷ್ಟಾಚಾರ ತಡೆ ಕಾಯಿದೆ ಅನ್ವಯವೂ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Copyright © All rights reserved Newsnap | Newsever by AF themes.
error: Content is protected !!