November 16, 2024

Newsnap Kannada

The World at your finger tips!

vote , election , Tripura

ಸೋಲಿಸಿದರೆ ಅಕ್ರಮ ಬಯಲು: ಗೆಲ್ಲಿಸಿದರೆ ಅಕ್ರಮ ಸಕ್ರಮವೇ? ಗಂಗಮ್ಮನ ವಿಶಿಷ್ಟ ಕರಪತ್ರ

Spread the love

ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲಿಸಿದರೆ ಗ್ರಾಮದಲ್ಲಿರುವ ಅಕ್ರಮಗಳನ್ನು ಬಯಲಿಗೆ ಎಳೆಯುತ್ತೇನೆ. ನೀವು ಗೆಲ್ಲಿಸಿದರೆ ಗ್ರಾಮದ ದೇವಸ್ಥಾನ, ಸ್ಮಶಾನ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿನೆ ಎನ್ನುವ ಮಹಿಳಾ ಅಭ್ಯರ್ಥಿಯೊಬ್ಬರ ಕರಪತ್ರ ಒಂದು ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿದೆ.

gangama 1

ಯಾವತ್ತೂ ಇಂತಹ ಪ್ರಚಾರದ ಕರಪತ್ರಗಳನ್ನು ನೋಡಿರಲು ಸಾದ್ಯವಿಲ್ಲ ಬಿಡಿ. ಇಲ್ಲಿ ಸರಿ ತಪ್ಪುಗಳ ಲೆಕ್ಕಾಚಾರದ ಅವಶ್ಯಕತೆಯನ್ನು ನೋಡುವ ಹಾಗಿಲ್ಲ. ಗೆಲುವಿಗೆ ಏನೂ ಬೇಕೋ ಅದನ್ನು ಮಾಡುವುದಷ್ಟೇ ಮುಖ್ಯ. ಹಾಗೇ ಸಿದ್ಧವಾಗಿದೆ ಈ ಪ್ರಚಾರದ ಕರಪತ್ರ.

ತುಮಕೂರು ಜಿಲ್ಲೆಯ ಹೆಬ್ಬೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕಲ್ಕೆರೆ ಗ್ರಾಮದ ಎಚ್ ಗಂಗಮ್ಮ , ವಿಶಿಷ್ಟವಾದ ಕರಪತ್ರವನ್ನ ಸಿದ್ಧಪಡಿಸಿದ್ದಾರೆ. ಗೆದ್ದರೇ ಮಾಡುವ ಕೆಲಸಗಳೇನು ? ಸೋತರೇ ಮಾಡುವ ಕೆಲಸಗಳ ಪಟ್ಟಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಸೋತರೆ ಏನು ಮಾಡುತ್ತೇನೆ?:

  • ಗಂಗಮ್ಮ ಸೋತರೇ 25 ಕುಟುಂಬಗಳು ಅನರ್ಹವಾಗಿ ರೇಷನ್ ಕಾರ್ಡ ಪಡೆದಿರುವುದನ್ನು ರದ್ದು ಮಾಡಿಸುವುದು.
  • ಗ್ರಾಮದಲ್ಲಿ 2019 ಗಣತಿಯ ಪ್ರಕಾರ 128 ಕುಟುಂಬಗಳು ವಾಸಿಸುತ್ತವೆ. ಇದರ ಪೈಕಿ 76 ಕುಟುಂಬಗಳು ಒಂದಿಲ್ಲಾ ಒಂದು ರಗಳೆಯಲ್ಲಿ ಇವೆ. ಅವುಗಳನ್ನು ಹೊರ ತಂದು ಅಕ್ರಮ ಸರಿಪಡಿಸೋದು.
  • ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು 40ಕ್ಕೂ ಹೆಚ್ಚು ಕುಟುಂಬಗಳು ಮೈತ್ರಿ, ಮನಸ್ವಿ ವಿಧವಾ ವೇತನ ಪಡೆಯುತ್ತಿದ್ದಾರೆ ಸೋತ ತಕ್ಷಣ ಅವುಗಳನ್ನು ನಿಲ್ಲಿಸುವ ಕೆಲಸ ಮಾಡುತ್ತೇನೆ.

ಇದು ಅಪರೂಪದ ಕರಪತ್ರ ನಿಜ. ಶಿಕ್ಷಣ ಸಚಿವ ಸುರೇಶಕುಮಾರ ಅವರೂ ಇಷ್ಟಪಟ್ಟು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಮಾಡಿದ್ದಾರೆ.

ಆದರೆ ಪಂಚಾಯತಿ ಚುನಾವಣೆಯಲ್ಲಿ ನನ್ನನ್ನು ಸೋಲಿಸಿದರೆ ಕೆಲವು ಜನರು ಮಾಡಿರುವ ಅಕ್ರಮಗಳನ್ನು ಬಯಲಿಗೆ ಎಳೆದು ಹೊರಗೆ ತರುತ್ತಾರೆ . ಗೆದ್ದರೆ ಎಲ್ಲಾ ಅಕ್ರಮಗಳು ಸಕ್ರಮವಾಗುತ್ತವೆ ಹೇಗೆ ? ಏನೋ ವಿಭಿನ್ನ ವಾಗಿ ಮಾಡಲು ಹೋಗಿ ಗಂಗಮ್ಮ ತಗಲು ಹಾಕಿಕೊಂಡಿದ್ದಾರೆ. ಏಕೆಂದರೆ ಮತದಾರರು ದಡ್ಡರಲ್ಲ!

Copyright © All rights reserved Newsnap | Newsever by AF themes.
error: Content is protected !!