ಬೆಂಗಳೂರು ಏರ್ಪೋರ್ಟ್ ನಲ್ಲಿ ‘22.5 ಲಕ್ಷ’ ಮೌಲ್ಯದ ಅಕ್ರಮ ಚಿನ್ನ ಸಾಗಣೆ

Team Newsnap
1 Min Read

ಬೆಂಗಳೂರು : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 22.5 ಲಕ್ಷದ 370 ಗ್ರಾಂ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ಇದೀಗ ಜಪ್ತಿ ಮಾಡಿ , ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ.

ಪ್ರಯಾಣಿಕನೊಬ್ಬ ಶಾರ್ಜಾ ಮೂಲಕ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದಳಿದು,ಪ್ಯಾಂಟ್ ಒಳಗಡೆ ಪೌಡರ್ ರೂಪದ ಚಿನ್ನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿ ಡಿಸೈನ್ ಆಗಿ ಪ್ಯಾಂಟ್ ಮಾಡಿಸಿ ಒಳಗಡೆ ಲೇಯರ್ ಗಳನ್ನು ಮಾಡಿ ಚಿನ್ನ ಅಡಗಿಟ್ಟಿಸಿದ್ದು, ಅನುಮಾನ ಗೊಂಡ ಅಧಿಕಾರಿಗಳು ಆತನನ್ನು ವಿಚಾರಣೆ ನಡೆಸಿದ್ದಾರೆ.

ಅಕ್ರಮವಾಗಿ ಚಿನ್ನವನ್ನು ಆತ ಪ್ಯಾಂಟ್ ಒಳಗಡೆ ಲೇಯರ್ ಗಳಲ್ಲಿ ಪೌಡರ್ ರೂಪದಲ್ಲಿ ಕಂಡು ಕಸ್ಟಮ್ ಅಧಿಕಾರಿಗಳು ಬೆರಗಾಗಿದ್ದಾರೆ.ಇಂದಿನಿಂದ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ಮಿಶ್ರಿತ ಹಾಲು ವಿತರಣೆ

ಈಗ ಅಧಿಕಾರಿಗಳು 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a comment